ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇದರ ಶಾಲಾ ಆವರಣದ ಸ್ವಚ್ಛತೆ ಹಾಗೂ ತೆಂಗಿನ ಮರಗಳ ಬುಡ ಬಿಡಿಸಿ ಸೊಪ್ಪು ಇಡುವ ಕೆಲಸವನ್ನು ಶ್ರೀ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇದರ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಶ್ರಮದಾನದ ಮೂಲಕ ನೆರವೇರಿಸಿದರು.


ಇಂತಹ ಹಲವು ಕೆಲಸ ಕಾರ್ಯಗಳಲ್ಲಿ ಸಂಘವು ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಉತ್ತಮ ಸಂಘಟನೆಯನ್ನು ಹೊಂದಿದ್ದು ಮಾದರಿಯಾಗಿದೆ. ಕಾರ್ಯಕ್ರಮದಲ್ಲಿ ಮಜಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಯುತ ಸಂಜೀವ ಮೂಲ್ಯರವರು ಭಾಗವಹಿಸಿದ್ದು ಸಹಕರಿಸಿದರು.
