ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಬೀರಿ ಬಳಿ ಲಾರಿ ಮತ್ತು ಬೈಕ್‍ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಸಹ ಸವಾರಗಂಭೀರವಾಗಿಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ
ತಲಪಾಡಿಚೆಕ್‍ಪೋಸ್ಟ್ ಬಳಿ ನಿವಾಸಿ ಮಹಮ್ಮದ್‍ ಝಕಾರಿಯಾ (23 )ಮೃತಪಟ್ಟವನಾಗಿದ್ದು, ತಲಪಾಡಿ ಕೆ.ಸಿ.ನಗರ ನಿವಾಸಿ ಶಿಯಾಬ್(22) ಗಂಭೀರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

 

ಝಕಾರಿಯಾ
9Ullal3  (1)

2

5

 

1 (1)

9Ullal2
ಘಟನೆಯ ವಿವರ : ಮಹಮ್ಮದ್‍ಝಕಾರಿಯಾಕ್ಯಾಂಟರಿಂಗ್ ಕೆಲಸ ಮುಗಿಸಿ ಮಂಗಳವಾರ ತಡರಾತ್ರಿತನ್ನ ಸ್ನೇಹಿತ ಶಿಯಾಬ್‍ನೊಂದಿಗೆ ತಲಪಾಡಿಕಡೆ ವಾಪಾಸ್ಸಾಗುತ್ತಿದ್ದಾಗ ಬೀರಿ ಬಳಿಯ ಮಾರಾಟತೆರಿಗೆಕೇಂದ್ರದ ಬಳಿ ನಿಲ್ಲಿಸಿದ್ದ ಲಾರಿಗೆಡಿಕ್ಕಿ ಹೊಡೆದು ಬೈಕ್ ಚಾಲನೆ ಮಾಡುತ್ತಿದ್ದ ಮಹಮ್ಮದ್‍ಝಕಾರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದುಬಾೈಯಲ್ಲಿ ಸುಮಾರುಒಂದು ವರ್ಷಗಳ ಕಾಲ ಉದ್ಯೋಗ ಮಾಡುತ್ತಿದ್ದಝಕಾರಿಯಾಊರಿಗೆ ಬಂದ ಬಳಿಕ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ . ಸೆ. 18ರಂದು ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಎನ್ನಲಾಗಿದ್ದು, ತಂದೆತಾಯಿ 5 ಮಂದಿ ಸಹೋದರರು, ಓರ್ವ ಸಹೋದರಿಯನ್ನುಅಗಲಿದ್ದಾನೆ.
ತುರವೇ ಪ್ರತಿಭಟನೆ : ರಾಷ್ಟ್ರೀಯ ಹೆದ್ದಾರಿಯ 66ರ ಬೀರಿ ಬಳಿಯಿರುವ ಮಾರಾಟತೆರಿಗೆತಪಾಸಣಾಕೇಂದ್ರದಿಂದ ಘನ ವಾಹನಗಳು ಹೆದ್ದಾರಿಯಲ್ಲೇ ನಿಲ್ಲಿಸಿ ಚಾಲಕರುತಪಾಸಣೆಕೇಂದ್ರಕ್ಕೆ ತೆರಳುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದ್ದು, ಇಲ್ಲಿ ಹಲವಾರು ಅಪಘಾತಗಳು ನಡೆಯುತ್ತಿದ್ದು, ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿಯ ವರ್ತನೆಕಾರಣಎಂದು ಆರೋಪಿಸಿ ತುಳುನಾಡು ರಕ್ಷಣಾ ವೇದಿಕೆ ಕಾರ್ಯಕರ್ತರು ವಾಣಿಜ್ಯತೆರಿಗೆತಪಾಸಣಾಕೇಂದ್ರದಎದುರು ಪ್ರತಿಭಟನೆ ನಡೆಸಿದರು. ಈ ಹಿಂದೆಯೂ ಅಪಘಾತಗಳು ನಡೆದಿದ್ದು, ಈ ಕುರಿತು ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ. ನಿನ್ನೆರಾತ್ರಿ ನಡೆದಘಟನೆಗೂ ವಾಣಿಜ್ಯ ತೆರಿಗೆ ಇಲಾಖೆಯೇಕಾರಣಎಂದು ತು.ರ.ವೇ.ಕೇಂದ್ರ ಸಮಿತಿ ಅಧ್ಯಕ್ಷ ಯೋಗಿಶ್ ಶೆಟ್ಟಿಜಪ್ಪು ಆರೋಪಿಸಿದರು.
ಈ ಸಂದರ್ಭದಲ್ಲಿ ಸಮಿತಿಯತಲಪಾಡಿಗ್ರಾಮಅಧ್ಯಕ್ಷ ಹಸೈನಾರ್ ಕೆ.ಸಿ.ರೋಡ್, ಸೋಮೇಶ್ವರ ಸಮಿತಿಅಧ್ಯಕ್ಷಅಹಮ್ಮದ್ ಪೆರಿಬೈಲ್, ಕೋಟೆಕಾರ್ ಸಮಿತಿಅಧ್ಯಕ್ಷರವಿ ಶೆಟ್ಟಿ, ಹಮೀದ್ ಹಸನ್ ಮಾಡೂರು ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾಣಿಜ್ಯತೆರಿಗೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಉಳ್ಳಾಲ ಪೆÇಲೀಸ್, ತು.ರ.ವೇ.ನಾಯಕರೊಂದಿಗೆ ಚರ್ಚಿಸಿ ಹೆದ್ದಾರಿಯಲ್ಲಿ ಭದ್ರತೆಯಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ನಿಲ್ಲಿಸಿದರು. ಉಳ್ಳಾಲ ಪೊಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

By suddi9

Leave a Reply

Your email address will not be published. Required fields are marked *