ಉಳ್ಳಾಲ: ಕೆ.ಸಿ.ರೋಡು ಮುಳ್ಳುಗುಡ್ಡೆ ನಿವಾಸಿ ಫರ್ಝಾನ (18) ಕಾಣೆಯಾದ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಯುಸಿ ವಿದ್ಯಾಭ್ಯಾಸ ನಡೆಸಿರುವ ಫರ್ಝಾನ ಶಿಕ್ಷಣವನ್ನು ಮೊಟಕುಗೊಳಿಸಿದ ಬಳಿಕ ಮನೆಯಲ್ಲೇ ಇದ್ದು, ಹೆಚ್ಚಾಗಿ ರಾತ್ರಿ 10 ಗಂಟೆಗೆ ಮಲಗಿದರೆ ಬೆಳಗ್ಗೆ 6 ಗಂಟೆಗೆ ಎಳುತ್ತಿದ್ದರು. ನಿನ್ನೆಯೂ ರಾತ್ರಿ 10 ಗಂಟೆಗೆ ಮಲಗಿದ್ದು ಬುಧವಾರ ಬೆಳಗ್ಗೆ ಎದ್ದಾಗ ಫರ್ಝಾನ ಮನೆಯಲ್ಲಿರಲಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದು ಪತ್ತೆಯಾಗದ ಹಿನ್ನಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಫರ್ಝಾನಳ ತಂದೆ ಪ್ರಕರಣ ದಾಖಲಿಸಿದ್ದಾರೆ ಉಳ್ಳಾಲ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.
