• “ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ”
    ಸುದ್ದಿ9ಕೈಕಂಬ: ಕರಾವಳಿಯ ಪ್ರಸಿದ್ಧ ಕಲೆಗಳಲ್ಲಿ ಒಂದಾದ ಯಕ್ಷಗಾನವನ್ನು ಪ್ರೋತ್ಸಾಹಿಸುವ ಆಶಯದೊಂದಿಗೆ .ಅಶಕ್ತ ಕಲಾವಿದರ ಸಮಗ್ರ ಕಲ್ಯಾಣದ ಸದುದ್ದೇಶವನ್ನಿಟ್ಟುಕೊಂಡು ಗುರು ಹಿರಿಯರ ಮಾರ್ಗದರ್ಶನದೊಂದಿಗೆ ಪ್ರಸಿದ್ಧ ಯಕ್ಷಗಾನ ಭಾಗವತರಾದ ಸತೀಶ್ ಕುಮಾರ್ ಶೆಟ್ಟಿ ಪಟ್ಲ ಅವರು “ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದರ ಸಲಹಾ ಮಂಡಳಿ ಯಲ್ಲಿ ಮಾರ್ಗದರ್ಶಕರಾಗಿ ಪಟ್ಲಗುತ್ತು ಮಹಾಬಲ ಶೆಟ್ಟಿ, ಗೌರವಾಧ್ಯಕ್ಷರಾಗಿ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುಧೀರ್ ಭಟ್ ಎಕ್ಕಾರು, ಐಕಳ ಗಣೇಶ್ ಶೆಟ್ಟಿ, ಪೆರ್ಮುದೆ ಅಶೋಕ್ ಶೆಟ್ಟಿ, ಕಾರ್ಯದರ್ಶಿ  ಅಡ್ಯಾರು ಪುರುಷೋತ್ತಮ ಭಂಡಾರಿ, ಜೊತೆ ಕಾರ್ಯದರ್ಶಿಗಳಾಗಿ ಕುಂದಾಪುರ ಉದಯಾನಂದ ಶೆಟ್ಟಿ, ರಾಜೀವ ಕೆ.ಕೈಕಂಬ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ,, ಜಗನ್ನಾಥ ಶೆಟ್ಟಿ ಬಾಳ, ಕೋಶಾಧಿಕಾರಿ ಸಿ ಎ ಸುದೇಶ್ ಕುಮಾರ್ ರೈ, ಯೋಜನಾ ನಿರ್ದೇಶಕರಾದ  ಡಾ.ಸತೀಶ್ ಭಂಡಾರಿ   ಡೀ ನ್ ಕ್ಷೇಮ ಮಂಗಳೂರು ,    ಕೆ.ಎಂ .ಸಿ   ಮಂಗಳೂರು,  ಡಾ.ಪದ್ಮನಾಭ ಕಾಮತ್  ಸಲಹಾ ಮಂಡಳಿಯಲ್ಲಿದ್ದಾರೆ.
  • pattla
  • ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಉದ್ಘಾಟನೆಯು. ಸೆ. 14 ರಂದು ಸೋಮವಾರ 5.30 ಕ್ಕೆ ಶ್ರೀ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ಸರಸ್ವತಿ ಸದನದಲ್ಲಿ ಜರಗಲಿದೆ.
  • ಅಂದು ಮಧ್ಯಾಹ್ನ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಚಂದ್ರಾವಳಿ ವಿಲಾಸ” ಮತ್ತು ಶೀವಾರ್ಚನೆ ” ಯಕ್ಷಗಾನ ಬಯಲಾಟ ಜರಗಲಿದೆ.
    ಸಂಜೆ 5.30ರಿಂದ ಸಭಾ ಕಾರ್ಯಕ್ರಮ  ಆಶೀರ್ವಚನವನ್ನು ಶ್ರೀ ಗುರು ದೇವಾನಂದ ಸ್ವಾಮಿಜಿ ನೀಡಲಿದ್ದಾರೆ,ದಿವ್ಯ ಉಪಸ್ಥಿತಿ ಶ್ರೀ ಕ್ಷೇತ್ರ ಕಟೀಲು ಅನುವಂಶೀಯ ಮೊಕ್ತೆಸರ ಶ್ರೀ ವಾಸುದೇವ ಆಸ್ರಣ್ಣ ,ಶ್ರೀ ಕ್ಷೇತ್ರ ಕಟೀಲು ವೇದಮೂರ್ತಿಗ ಳಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಶ್ರೀ ಅನಂತಪದ್ಮಾನಾಭ ಆಸ್ರಣ್ಣ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾಉಸ್ತುವರಿ ಸಚಿವ ಶ್ರೀ ಬಿ. ರಮಾನಾಥ ರೈ,ಯುವಜನ ಕ್ರೀಡೆ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು,ಮಾತೃ ಸಂಘ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀ ದೇವಿಎಜ್ಯುಕೇಶನ್ ಟ್ರಸ್ಟ್ ಎ.ಸದಾನಂದ ಶೆಟ್ಟಿ, ಮುಂಬೈ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ,ಮಸ್ಕತ್ ಉಧ್ಯಮಿ ಎಸ್. ಕೆ.ಪೂಜಾರಿ, ಒಡ್ಡೂರು ಫಾರ್ಮ್  ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಪಾಪ್ಯುಲರ್ ಫಾಮ್ರ್ಸ ಜಗದೀಶ್ ಮರವೂರ್, ಬಜ್ಪೆ ಶಾಂತಿಭವನ ರಾಘವೇಂದ್ರ ಆಚಾರ್ ,ಜಿ.ಪಂ ಸದಸ್ಯ ಈಶ್ವರ್ ಕಟೀಲು, ಕಟೀಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರ್ತಿ ಭಾಗವಹಿಸುವರು ಎಂದು ಯಕ್ಷ ಧ್ರುವಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕರಾದ ಸತೀಶ್ ಶೆಟ್ಟಿ ಪಟ್ಲ ಸುದ್ದಿ9  ಗೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *