ಕೈಕಂಬ: ಬಡಗಬೆಳ್ಳೂರು: ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ 9ನೇ ವರ್ಷದ ಮೊಸರುಕುಡಿಕೆ ಸಭಾಕ್ರಮದ ಉದ್ಘಟನೆಯನ್ನು ಬಳ್ಳಿಮನೆ ಪ್ರಸನ್ನ ಭಂಡಾರಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ನಾಸಿಕ್ ಉದ್ಯಮಿ ಕೃಷ್ಣಪ್ಪ ಪೂಜಾರಿ ಕುಕ್ಕಾಜೆ ವಹಿಸಿದ್ದರು.

ಅಮ್ಟಾಡಿ ಗ್ರಾ.ಪಂ.ಸದಸ್ಯ ಸುಧಾಕರ ಶೆಟ್ಟಿಭಾಗಂತ್ರಬೈಲು, ಕಾವೇಶ್ವರ ಭಕ್ತವೃಂದದ ಆದ್ಯಕ್ಷ ಚಿದಾನಂದ ಬಡಗಬೆಳ್ಳೂರು ಗ್ರಾ. ಪಂ. ಸದಸ್ಯ ಅನುಪ್ ಸುಮಿತ್ ಫೆರ್ನಾಂಡಿಸ್, ಕೃಷಿಕ ಉಮೇಶ್ ಶೆಟ್ಟಿ ಪರಿಮೊಗರು ಉಪಸ್ಥಿತರಿದ್ದರು. ರಮೇಶ್ ಪೂಜಾರಿ ಬಟ್ಟಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಆಟೋಟ ಸ್ಪರ್ಧೆ ಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು
ಚಿತ್ರ. ಜಾನ್ ನಾಸಿಕ್.





