ಮುಂಬೈ: ಬಾಲಿವುಡ್`ನ ಖ್ಯಾತ ನಟ ಸಲ್ಮಾನ್ ಖಾನ್ ತಂದೆ ಹಿರಿಯ ಸಂಭಾಷಣೆಕಾರ ಸಲೀಮ್ ಖಾನ್ ನರೇಂದ್ರಮೋದಿಯ ಅಧಿಕೃತ ವೆಬ್ ಸೈಟನ್ನು(www.narendramodi.in)ಉರ್ದು ಭಾಷೆಯಲ್ಲಿ ಶುರು ಮಾಡಿದ್ದಾರೆ. ಇಂದು ಬೆಳಗ್ಗೆ ಮುಂಬೈನ ಸಬರ್ಬನ್`ನಲ್ಲಿರುವ ತಮ್ಮ ನಿವಾಸದಲ್ಲಿ ಖಾನ್ ನರೇಂದ್ರ ಮೋದಿ ವೆಬ್ ಸೈಟನ್ನ ಲೋಕಾರ್ಪಣೆ ಮಾಡಿದ್ದಾರೆ.ಸಲೀಮ್ ಖಾನ್ ಕುಟುಂಬ ಮೊದಲಿನಿಂದಲೂ ನರೇಂದ್ರ ಮೋದಿಯನ್ನ ಬೆಂಬಲಿಸುತ್ತಿದ್ದು, ಗುಜರಾತ್ ಗಲಭೆ ಕುರಿತಂತೆ ಹಲವು ಬಾರಿ ನರೇಂದ್ರ ಮೋದಿಯನ್ನ ಸಮರ್ಥಿಸಿಕೊಂಡಿದ್ದಾರೆ. ನರೇಂದ್ರ ಮೋದಿಯ ಆಡಳಿತದಲ್ಲಿ ಮುಸ್ಲಿಂ ಜನಾಂಗ ಸುರಕ್ಷಿತವಾಗಿರುತ್ತೆ, ಕಳೆದ 12 ವರ್ಷಗಳಿಂದ ಗುಜರಾತ್`ನಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ಖಾನ್ ಸಮರ್ಥನೆ ನೀಡಿದ್ದರು.
ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ 1992ರ ಮುಂಬೈ ಗಲಭೆಯನ್ನ ಉಲ್ಲೇಖಿಸಿರುವ ಸಲೀಮ್ ಖಾನ್, ಅಂದು ನಡೆದ ಸಾವು ನೋವಿಗೆ ಅಂದಿನ ಮುಖ್ಯಮಂತ್ರಿಯನ್ನು ಯಾರೂ ಟೀಕಿಸಲಿಲ್ಲ ಏಕೆ..? ಅಂದು ಹಿಂಸಾಚಾರ ನಡೆಯುತ್ತಿದ್ದರೂ ಮೂಕ ಪ್ರೇಕ್ಷರಾಗಿದ್ದ ಸಿಎಂ ಬಗ್ಗೆ ಯಾರೂ ಧ್ವನಿ ಎತ್ತಲಿಲ್ಲ ಏಕೆ..? ಎಂದು ಸಲೀಮ್ ಖಾನ್ ಪ್ರಶ್ನಿಸಿದ್ದಾರೆ.

