ಬಂಟ್ವಾಳ: ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ, ದಾರಿ ಮಧ್ಯೆ 108 ಅಂಬ್ಯುಲೆನ್ಸ್ ವಾಹನದಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಬಿ.ಸಿ.ರೋಡು -ಬಂಟ್ವಾಳ ರಸ್ತೆಯಲ್ಲಿ ನಡೆದಿದೆ.

ಬಂಟ್ವಾಳ ಬಿಕಸ್ಬಾ ಗ್ರಾಮ ಗುಡ್ಡೆಯಂಗಡಿ ನಿವಾಸಿ ಬಡಗನ್ನೂರು ನಿವಾಸಿ ಮಹಿಳೆ ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು 108 ಆರೋಗ್ಯ ರಕ್ಷಾ ಕವಚ ವಾಹನದಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ಈ ನಡುವೆ ಬಂಟ್ವಾಳ ತಲುಪುವ ಮುನ್ನವೇ ಮಹಿಳೆಗೆ ಹೆರಿಗೆ ನೋವು ತೀವ್ರವಾದ ಹಿನ್ನೆಲೆಯಲ್ಲಿ ದಾರಿಮಧ್ಯೆ ವಾಹನ ನಿಲ್ಲಿಸಿ ಹೆರಿಗೆ ಮಾಡಿಸಲಾಯಿತು. ಸ್ಟಾಫ್ ನರ್ಸ್, ಹಿಮಕರ್, ಡ್ರೈವರ್ ನಾಗಪ್ಪ , ಹೆರಿಗೆಯಾದ ಮಹಿಳೆಯ ಪತಿ, ಸಂಬಂಧಿ ಮಹಿಳೆ ಈ ಸಂದರ್ಭ ಇದ್ದರು.
