ಬಂಟ್ವಾಳ: ಬಾಲ್ಯದಿಂದಲೇ ತುಂಟಾಟ ಮತ್ತು ಪವಾಡಗಳ ಮೂಲಕ ಗೋವುಗಳೊಂದಿಗೆ ಬೆಳೆದು ಬಳಿಕ ಸಮಾಜಕ್ಕೆ ಒಳಿತು-ಕೆಡುಕಿನ ಬಗ್ಗೆ ಭಗವದ್ಗೀತೆÉಂಬ ಪವಿತ್ರ ಧಾರ್ಮಿಕ ಸಂದೇಶ ನೀಡಿದ ಶ್ರೀಕೃಷ್ಣನು ನಿಷ್ಕಲ್ಮಶ ಭಕ್ತಿಗೆ ಸುಲಭವಾಗಿ ಒಲಿಯುವ ದೇವರು ಎಂದು ರಾಜ್ಯಪ್ರಶಸ್ತಿ ಪುರಸ್ಕøತ ಮುಖ್ಯಶಿಕ್ಷಕ ಕೆ.ಮೇಶ ನಾಯಕ್ ರಾಯಿ ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಬಸ್ತಿಕೋಡಿ ನಾಗರಿಕ ಸೇವಾ ಸಮಿತಿ ವತಿಯಿಂದ ಭಾನುವಾರ ನಡೆದ 23ನೇ ವರ್ಷದ ಮೊಸರುಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಥಳೀಯ ಗ್ರಾ.ಪಂ.ಸದಸ್ಯ ಉದಯ ಕುಮಾರ್ ಶೆಟ್ಟಿ ವಿವಿಧ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಸ್ಥಳೀಯ ಉದ್ಯಮಿ ಸತೀಶ ಬಂಗೇರ, ಹುಸೈನಬ್ಬ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಆನಂದ ಆಚಾರ್ಯ, ಯುವರಾಜ ಆಳ್ವ, ಸದಸ್ಯ ವಿಶ್ವನಾಥ ಶೆಟ್ಟಿ, ಪ್ರಮುಖರಾದ ಗಂಗಾಧರ ಗಟ್ಟಿ ಪೊರಿಗುಡ್ಡೆ, ಜಯರಾಮ ಶೆಟ್ಟಿ ಮಾವಿನಕಟ್ಟೆ, ಸಮಿತಿ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಮತ್ತಿತರರು ಶುಭ ಹಾರೈಸಿದರು.
ಸಮಿತಿ ಮಾಜಿ ಅಧ್ಯಕ್ಷ ಎ.ಪ್ರವೀಣ ಗಟ್ಟಿ ಸ್ವಾಗತಿಸಿ ವಂದಿಸಿದರು. ಭರತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
