ಮೂಡುಬಿದರೆ: ಹಂದಿಗೆ ಉಪಯೋಗಿಸುವ ಕೊಳೆತ ಅಹಾರವನ್ನು ಜನವಸತಿ ಇರುವ ಪ್ರದೇಶದಲ್ಲಿ ದಾಸ್ತಾನಿರಿಸುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಮಾರೂರಿನ ಲ್ಯಾನ್ಸಿ ಸೆರೆವೊ ಎಂಬವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
mbd_aug31_27
ಮಾರೂರಿನಲ್ಲಿ ಜೋನ್ ರೇಗೊ ಎಂಬವರ ಹಂದಿ ಸಾಕಾಣಿಕೆ ಮಾಡುತ್ತಿದ್ದು ಹಂದಿಗಳಿಗೆ ಆಹಾರ ನೀಡಲು ಹೊಟೇಲ್ನ ತ್ಯಾಜ್ಯಗಳನ್ನು ತಂದು ಮನೆ ಹತ್ತಿರದ ಸರಕಾರಿ ಜಾಗದಲ್ಲಿ ರಾಶಿ ಹಾಕಿರುತ್ತಾರೆ. ಯಾವುದೇ ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳದೆ ಕೊಳೆತ ಆಹಾರವನ್ನು ಸಂಗ್ರಹಿಡುವುದರಿಂದ ಪರಿಸರದಲ್ಲಿ ದುರ್ನಾ ತ ಬೀರುತ್ತಿದ್ದು ಸುತ್ತಮುತ್ತಲಿನವರಿಗೆ ತೊಂದರೆ ಉಂಟಾಗುತ್ತಿದೆ. ಹಂದಿ ಗೂಡನ್ನು ತೊಳೆದ ಕಲುಷಿತ ನೀರನ್ನು ಹತ್ತಿರದ ಪಲ್ಗುಣಿ ನದಿಗೆ ಬಿಟ್ಟು ನೀರನ್ನು ಕಲುಷಿತಗೊಳಿಸಲಾಗುತ್ತಿದೆ. ಪುರಸಭೆ ಕಾನೂನನ್ನು ಉಲ್ಲಂಘಿಸಿ ಹಂದಿ ಸಾಕುತ್ತಿರುವ ಜೋನ್ ರೇಗೊ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೆರೆಮನೆಯ ಲ್ಯಾನ್ಸಿ ಸೆರಾವೊ ಪುರಸಭೆ ಮತ್ತು ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *