ಮೂಡುಬಿದರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿವಿಹಾರ ಚಾಲನೆ, ಕೆರೆಗೆ ಮೀನುಗಳನ್ನು ಬಿಡುವುದು ಹಾಗೂ ವನಮಹೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.
ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಮದಿಗೆ ಮಾತನಾಡಿ, ಕಡಲಕೆರೆಯಲ್ಲಿ ಸುಮಾರು 2.5ಕೋಟಿ ರೂಪಾಯಿ ವೆಚ್ಚದಲ್ಲಿ ಹೂಳೆತ್ತಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ಅಥವಾ ಯುವಸಬಲೀಕರಣ ಇಲಾಖೆಯಿಂದ ಎರಡು ಹೊಸ ಬೋಟ್‍ಗಳನ್ನು ಒದಗಿಸಲಾಗುವುದು. ಪ್ರಕೃತಿ ಸಹಜ ವಾತಾವರಣ ಇಲ್ಲಿದ್ದು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ ಎಂದರು.
ಮೂಡುಬಿದರೆ ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಸ್ಥಾಯಿಸಮಿತಿಯ ಅಧ್ಯಕ್ಷ ಕೊರಗಪ್ಪ, ಮೂಡಾದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್, ಮೂಡುಬಿದಿರೆ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಕಿಶೋರ್ ಕುಮಾರ್, ಅರಣ್ಯಾಧಿಕಾರಿ ಜಿ.ಡಿ.ದಿನೇಶ್, ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ.ಥೋಮಸ್, ಮೂಡುಬಿದರೆ ರೋಟರಿಕ್ಲಬ್ ಟೆಂಪಲ್‍ಟೌನ್ ಅಧ್ಯಕ್ಷ ಉಮೇಶ್ ರಾವ್, ಲಯನ್ಸ್ ಕ್ಲಬ್ ಅಧ್ಯಕ್ಷ ಆ್ಯಂಡ್ರೂ ಡಿ`ಸೋಜ, ಇನ್ನರ್‍ವೀಲ್ ಅಧ್ಯಕ್ಷೆ ರತ್ನಾ ಪರಾಡ್ಕರ್, ಕೃಷಿ ತಜ್ಞ ಡಾ.ಎಲ್.ಸಿ.ಸೋನ್ಸ್ ಉಪಸ್ಥಿತರಿದ್ದರು.
ಅರಣ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಡಲಕೆರೆಯ ಕಾಲುಪಥದಲ್ಲಿ ಹಲವಾರು ಗಿಡಗಳನ್ನು ನೆಡಲಾಯಿತು.

