ಕೈಕಂಬ: ಪೊಂಪೈ ಮಾತೆ ದೇವಾಲಯದ ಕಥೊಲಿಕ್ ಸಭಾ ಗುರುಪುರ ಘಟಕವು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆ.30ರಂದು ಭಾನುವಾರ ಪೊಂಪೈ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಂಪೈ ಮಾತೆ ದೇವಾಲಯದ ಧರ್ಮಗುರುಗಳು ವಂ.ಫಾದರ್ ಪಾವ್ಲ್ ಪಿಂಟೊರವರು ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಮುತ್ತೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಉದಯ ಕುಮಾರಿ ಹಾಗೂ ರೋಸಾಮಿಸ್ತಿಕಾ ಕನ್ಯಾಮಠದ ಮುಖ್ಯಸ್ಥೆ ಭಗಿನಿ ಜುಲಿಯಾನ ಮೋನಿಸ್‍ರವರು ಉಪಸ್ಥಿತರಿದ್ದರು. ಪಾಲನಾ ಸಮಿತಿಯ ಉಪಾಧ್ಯಕ್ಷರು ಶ್ರೀ ಜೋನ್ಸನ್ ಲೋಬೊ ಹಾಗೂ ಕಾರ್ಯದರ್ಶಿ ಶ್ರೀಮತಿ ಲಿಲ್ಲಿ ಮಥಾಯಸ್‍ರವರು ಉಪಸ್ಥಿತರಿದ್ದರು. ಕೈಕಂಬ ಪರಿಸರದ ಎಲ್ಲಾ ಧರ್ಮಗಳ 75 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶ್ರೀಮತಿ ಡೆಲ್ಸಿ ರೊಡ್ರಿಗಸ್ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಓಸ್ವಲ್ಡ್ ರೊಡ್ರಿಗಸ್ ವಂದಿಸಿದರು. ಖಜಾಂಜಿ ಶ್ರೀಮತಿ ಶಾಂತಿ ಕುವೆಲ್ಲೊರವರು ಕಾರ್ಯಕ್ರಮವನ್ನು ನಿರೂಪಿಸಿದರು.













