ಬಂಟ್ವಾಳ: ಕಾಮದೇನು ತೆಂಗು ಬೆಳಗಾರರ ಉತ್ಪಾದಕರ ಸೌಹಾರ್ಧ ಸೊಸೈಟಿ(ರಿ) ಮಂಚಿ ಇದರ ಪ್ರಥಮ ಸಭೆ ಆ.26 ರಂದು ಮಂಚಿ ಗ್ರಾಮ ಪಂಚಾಯತ್ ಕಟ್ಟಡದ ಸಬಾಭವನದಲ್ಲಿ ಸಂಘದ ಅದ್ಯಕ್ಷ ಬಿ ಉಮ್ಮರ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.
7448ತಾಲೂಕು ಅದ್ಯಕ್ಷರಾದ ಬಿ ರಾಜಶೇಖರ್ ರೈ, ಪದ್ಮಾಭ ರೈ ಗೋಳ್ತಮಜಲು, ಬಂಟ್ವಾಳ ಪುರಸಭೆ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಮಂಚಿ ಗ್ರಾ.ಪಂ. ಅದ್ಯಕ್ಷೆ ಪ್ರಮೀಳಾ ಮತ್ತು ಉಪಾದ್ಯಕ್ಷ ಮೋಹನದಾಸ ಶೆಟ್ಟಿ, ಸಂಘದ ಕಾರ್ಯದರ್ಶಿಯಾದ ಬದ್ರುದ್ದೀನ್ ಕಯ್ಯೂರು, ಅಬೂಬಕ್ಕರ್ ಅಮ್ಮುಂಜೆ ಉಪಸ್ಥಿತರಿದ್ದರು.
ಮುರುವ ಮಹಾಬಲ ಭಟ್ ಸಂಘದ ಚಟುವಟಿಕೆ, ತೆಂಗು ಉತ್ಪಾದನೆ ಮಾರುಕಟ್ಟೆ ಮತ್ತು ನಿರ್ವಹಣೆ ಬಗ್ಗೆ ಸದಸ್ಯರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಬಿ ಉಮ್ಮರ್ ಸ್ವಾಗತಿಸಿದರು ದಿವಾಕರ್ ನಾಯಕ್ ದನ್ಯವಾದ ಸಮರ್ಪಿಸಿದರು. ಕೊನೆಯಲ್ಲಿ ತೆಂಗಿನ ಮರ ಏರುವ ಸಾಧನದ ಮೂಲಕ ಪ್ರಾತೃಕ್ಷತೆ ನೀಡಿ ಪ್ರೋತ್ಸಾಹಿಸಲಾಯಿತು.

By Suddi9

Leave a Reply

Your email address will not be published. Required fields are marked *