ಬಂಟ್ವಾಳ : ನೇರಳಕಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷರಾಗಿ ರೋಹಿತಾಶ್ವ ಪುನರಾಯ್ಕೆಯೊಂಡಿದ್ದಾರೆ. ನೆಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷ ವಿಜಯ ಅವರ ಅಧ್ಯಕ್ಷತೆ ವಿಜಯ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾಭಿವೃದ್ದಿ ಸಮಿತಿ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
29 Aug Rohithashva copy
ಉಪಾಧ್ಯಕ್ಷರಾಗಿ ಭಾರತಿ, ಪದನಿಮಿತ್ತ ಸದಸ್ಯರುಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ರೇವತಿ, ಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಆರೋಗ್ಯ ಇಲಾಖೆಯ ಕಸ್ತೂರಿ, ಅಂಗನವಾಡಿ ಶಿಕ್ಷಕಿ ವಸಂತಿ ಎಂ.ಆರ್. ಹಾಗೂ ಶಾಲಾ ವಿದ್ಯಾರ್ಥಿ ನಾಯಕ ದೀಪಕ್ ಅವರನ್ನು ಆರಿಸಲಾಯಿತು. ಸಮಿತಿಗೆ ಅನಂತಾಡಿ ಗ್ರಾ.ಪಂ. ಮಾಜಿ ಸದಸ್ಯ ಅಬ್ಬಾಸ ಸಹಿತ 15 ಮಂದಿಯನ್ನು ನೇಮಿಸಲಾಯಿತು.
ನೆಟ್ಲಮುಡ್ನೂರು ಗ್ರಾ.ಪಂ. ಹಾಗೂ ಸಾಮಾಜಿಕ ಸೌಕರ್ಯ ಸಮಿತಿ ಸದಸ್ಯರುಗಳಾದ ಲತೀಫ್ ನೇರಳಕಟ್ಟೆ, ಡಿ. ತನಿಯಪ್ಪ ಗೌಡ, ರಾಮಚಂದ್ರ, ಪ್ರೇಮನಾಥ ಶೆಟ್ಟಿ, ಶ್ರೀಧರ ರೈ, ಸಮಿತಾ ಡಿ. ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿ, ವಂದಿಸಿದರು. ಸಹ ಶಿಕ್ಷಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *