ಬಂಟ್ವಾಳ : ಭಕ್ತಿ ಶ್ರದ್ದೆಯಿಂದ ಮಾಡುವ ಕೆಲಸಕ್ಕೆ ದೇವರ ಕೃಪೆ ಇರುತ್ತದೆ. ಒಂದು ಕಾಲದಲ್ಲಿ ಭೂಮಿಯ ಪಟ್ಟೆ ಇದ್ದ ಕೆಲವೇ ಮಂದಿ ಪಟ್ಟಾದಾರರಿದ್ದರು. ಆಗ ದೈವ ದೇವರ ಕೆಲಸಗಳನ್ನು ಅವರು ಸೀಮಿತವಾಗಿ ಮಾಡುತ್ತಿದ್ದರು. ಇಂದು ಒಂದು ಗ್ರಾಮದಲ್ಲಿ ಸಹಸ್ರಾರು ಮಂದಿ ಪಟ್ಟಾದಾರರಿದ್ದಾರೆ. ದೇವರ ಕೆಲಸಕ್ಕೆ ದಾನ ನೀಡುವ ಶಕ್ತಿವಂತರಿದ್ದಾರೆ. ಹಾಗಾಗಿ ಇಂದಿನ ಕಾಲದಲ್ಲಿ ದೈವಸ್ಥಾನ ನಿರ್ಮಾಣ ಒಂದು ಸಮಸ್ಯೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

3008bteph7
ಅವರು ಆ. 30ರಂದು ಮುದೆಲ್‍ಮುಟ್ಟಿ ಶ್ರೀ ನಾಲ್ಕೈತ್ತಾಯ ಪರಿವಾರ ದೈವಗಳ ಶಿಲಾಮಯ ದೈವಸ್ಥಾನಕ್ಕೆ ಪಾದುಕಾನ್ಯಾಸ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಗತ್ತಿನ ಎಲ್ಲಾ ಸೊತ್ತುಗಳಿಗೆ ದೇವರೇ ಯಜಮಾನ. ಆದರೆ ಮಾನವ ಅದು ತನ್ನದು ಇದು ತನ್ನದು ಎಂಬ ತರ್ಕವನ್ನು, ಹಕ್ಕನ್ನು ಹೇಳುತ್ತಾರೆ. ವಾಸ್ತವದಲ್ಲಿ ಎಲ್ಲವೂ ದೇವರದೇ ಆಗಿರುವುದು ಎಂದು ನುಡಿದರು.
ಯಾವುದೇ ಒಂದು ದೈವಸ್ಥಾನವನ್ನು ನಮ್ಮ ಸೌಕರ್ಯಕ್ಕಾಗಿ ದೇವರನ್ನಾಗಿ ಮಾಡುವುದು. ದೇವರ ಕ್ಷೇತ್ರವನ್ನು ದೈವಸ್ಥಾನವಾಗಿ ಪರಿವರ್ತಿಸುವುದು ಉಚಿತವಲ್ಲ. ಇದರಿಂದ ಸಮಸ್ಯೆಗಳು ಹೊರತು ಸಾಧನೆಗಳಿಲ್ಲ ಎಂದರು.
ಧಾರ್ಮಿಕ ಸಭೆಯನ್ನು ದೀಪ ಬೆಳಗಿಸುವ ಮೂಲಕ ನಿಲೇಶ್ವರ ಪದ್ಮನಾಭ ತಂತ್ರಿಗಳು ನೆರೆವೇರಿಸಿದರು. ಶಾಸ್ತ್ರ ಕ್ರಮದಲ್ಲಿ ನಡೆಯುವ ಎಲ್ಲಾ ಕೆಲಸಗಳಿಗೆ ಒಂದು ನಿರ್ದಿಷ್ಟ ತಂತ್ರಗಳಿದ್ದು ಅದರ ಪ್ರಕಾರ ನಡೆಯುವ ವಿ„ಗಳಿಂದ ಕ್ಷೇತ್ರಕ್ಕೆ ದೈವದ ದೇವರ ಶಕ್ತಿಯು ತುಂಬುವುದು. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನವನ್ನು ಒಂದು ಕಾಲದಲ್ಲಿ ಎ.ಸಿ.ಭಂಡಾರಿಯವರು ಅಭಿವೃದ್ದಿ ಪಡಿಸಿದ್ದರು. ಮುದೆಲ್‍ಮುಟ್ಟಿ ದೈವಸ್ಥಾನವನ್ನು ಅಭಿವೃದ್ದಿ ಮಾಡುವ ಯೋಗವು ಅವರಿಗೆ ಬಂದಿದೆ. ಇಲ್ಲಿನ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರವನ್ನು ಜಯಶಂಕರ ಬಾಸ್ರಿತ್ತಾಯರು ಅಭಿವೃದ್ದಿ ಪಡಿಸಿದರು ಎಂದು ವಿವರಿಸಿದರು.
ಜಿ.ಪಂ. ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಇಲ್ಲಿನ ಕುಡಿಯುವ ನೀರಿನ ಬಾವಿಗೆ 2ಲಕ್ಷ ಅನುದಾನ ಪ್ರಕಟಿಸಿದ್ದು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಉದ್ಯಮಿ ರಘು ಸಪಲ್ಯ, ದೈವದ ಕೋಟಿ ಮಾರ್ತರು, ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಸಿ. ಭಂಡಾರಿ ಸ್ವಾಗತಿಸಿ ಪ್ರಸ್ತಾವನೆ ನೀಡಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ 20ಲಕ್ಷ ರೂ. ಅನುದಾನ ಕೊಡಿಸಿದ್ದಾರೆ ಎಂದು ಪ್ರಕಟಿಸಿದರು. ಇಲ್ಲಿಗೆ ಕಡಿಮೆ ಬೀಳುವ ಅನುದಾನವನ್ನು ಒದಗಿಸಿಕೊಡುವ ವಿಶ್ವಾಸವಿದೆ ಎಂದು ನುಡಿದರು.  ಕಾರ್ಯಕ್ರಮದಲ್ಲಿ ದಿನೇಶ್ ಭಂಡಾರಿ ವಂದಿಸಿದರು. ಸುರೇಶ್ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು.

 

By Suddi9

Leave a Reply

Your email address will not be published. Required fields are marked *