ಶತಮಾನದ ಸೇವೆ ಶ್ರೇಷ್ಠತೆ ತೋರುವ ಸಾಧನೆ : ಬಿಷಪ್ ಜೆರಾಲ್ಡ್ ಅಲ್ಮೇಡಾ
ಮುಂಬಯಿ: ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮೂದಾಯದ ಮುಂದಾಳುಗಳು ದಿ. ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಎಂದಾಗಿಸಿ ಸ್ಥಾಪಿಸಿ ಪ್ರಸ್ತುತ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಎಂದು ನಾಮಕರಿಸಲ್ಪಟ್ಟ ಮೊಡೇಲ್ ಬ್ಯಾಂಕ್‍ನ 98ನೇ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಸೈಂಟ್ ಕ್ಸೇವಿಯರ್ಸ್ ಇಂಜಿನೀಯರಿಂಗ್ ಕಾಲೇಜು ಸಭಾಗೃಹದಲ್ಲಿ ಮೊಡೇಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು.ಡಿ’ ಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿತು.
ಬ್ಯಾಂಕ್ ಗತ ಕ್ಯಾಲೆಂಡರ್ ಸಾಲಿನಲ್ಲಿ ಸುಮಾರು 610.82 ಕೋಟಿ ರೂಪಾಯಿ ಭದ್ರತಾ ಠೇವಣಿ (ಡೆಪಾಜಿಟ್) ಹೊಂದಿದ್ದು, 341.61 ಕೋಟಿ ರೂಪಾಯಿ ಮುಂಗಡ ಠೇವಣಿ (ಎಡ್ವಾನ್‍ಸಸ್), 67.30 ಕೋಟಿ ರೂಪಾಯಿ ಸಾಂದ್ರ ಆದಾಯ (ಗ್ರೋಸ್ ಇನ್‍ಕಂ) ಹಾಗೂ ಸುಮಾರು 10.42 ಕೋಟಿ ಲಕ್ಷ ರೂಪಾಯಿ ನಿವ್ವಳ ಲಾಭ (ನೆಟ್ ಪ್ರಾಫಿಟ್-ಪಿಬಿಟಿ) ಮತ್ತು ಸುಮಾರು 6.62 ಕೋಟಿ ಲಕ್ಷ ರೂಪಾಯಿ (ನೆಟ್ ಪ್ರಾಫಿಟ್-ಪಿಎಟಿ) ಹೊಂದಿದೆ. “ಇದು ಒಂದು ಸಮುದಾಯದ ಬ್ಯಾಂಕ್‍ಕ್ಕಿಂತ ಸಮಗ್ರ ಸಮಾಜದ ಬ್ಯಾಂಕು ಆಗಿದೆ. ಗ್ರಾಹಕರ ತೃಪ್ತಿಕರ ಸೇವೆಗೆ ನಾವು ಹೆಚ್ಚಿನ ಹಾಗೂ ಮೊದಲ ಆದ್ಯತೆ ನೀಡುತ್ತಿದ್ದು, ನಮ್ಮ ಬ್ಯಾಂಕ್‍ನಿಂದ ಆಥಿರ್üಕ ಲಾಭ ಪಡೆದ ಪ್ರತೀಯೋರ್ವ ಗ್ರಾಹಕರೂ ಫಲಾನುಭಸ್ಥರಾಗಿದ್ದಾರೆ. ಗ್ರಾಹಕರ ಸಹಯೋಗವೇ ಬ್ಯಾಂಕ್‍ನ್ನು ಮುನ್ನಡೆಸಲು ಪ್ರೇರಕವಾಗಿದೆ”ಎಂದÀು ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿ’ಸೋಜಾ ತಿಳಿಸಿದರು.
ಬ್ಯಾಂಕ್‍ನ 2013-14ರ ಸಾಲಿನ 300 ಕೋಟಿ ಮೊತ್ತಕ್ಕಿಂತ ಅಧಿಕ ಠೇವಣಿಯಲ್ಲಿನ ಸಾಧನಾಶೀಲ ವ್ಯವಹಾರಕ್ಕಾಗಿ ಇದೇ ಮೊತ್ತ ಮೊದಲ ಬಾರಿ ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಮೊಡೇಲ್ ಬ್ಯಾಂಕ್‍ಗೆ `ಶ್ರೇಷ್ಠ ಬ್ಯಾಂಕ್’ ಪುರಸ್ಕಾರದೊಂದಿಗೆ ತೃತೀಯ ಸ್ಥಾನ ಪ್ರಾಪ್ತಿಸಿರುವುದು ಅಭಿನಂದನೀಯ. ಇದಕ್ಕೆಲ್ಲಾ ಸಮಸ್ತ ಗ್ರಾಹಕರ, ಹಿಶೆದಾರರ ಸಹಯೋಗವೇ ಕಾರಣ ಎಂದು ಆಲ್ಬರ್ಟ್ ಡಿ’ಸೋಜಾ ತಿಳಿಸುತ್ತಾ ಬ್ಯಾಂಕ್‍ನ ವಾರ್ಷಿಕ ಕಾರ್ಯಸಿದ್ಧಿಗಳನ್ನು ವಿವರಿಸಿ ವರ್ಷದಾದ್ಯಂತದ ನಿವ್ವಳ ಲಾಭ ಮತ್ತು ಲೆಕ್ಕ ಶೋಧನಾ ಮಾಹಿತಿ ನೀಡಿ ಹಿಶೆದಾರರಿಗೆ12%ನ್ನು ಡಿವಿಡೆಂಡ್ ಪ್ರಕಟಿಸಿದರು.
ಮಹಾಸಭೆಯ ಆದಿಯಲ್ಲಿ ಜಬ್ಬಲ್‍ಪುರ ಧರ್ಮಪ್ರಾಂತ್ರ್ಯದ ಬಿಷಪ್ ರೈ| ರೆ| ಜೆರಾಲ್ಡ್ ಅಲ್ಮೇಡಾ ಅವರು ಕೃತಜ್ಞತಾಪೂಜೆ ನೆರವೇರಿಸಿ ಹರಸುತ್ತಾ ಕ್ರಿಶ್ಚನ್ನರ ಬಲವೇ ದೇವರಾಗಿದ್ದಾರೆ. ಆದುದರಿಂದ ಕ್ರೈಸ್ತರು ಸದಾ ವಿಧೇಯಕರಾಗಿ ನಿರಪೇಕ್ಷ ಬದುಕನ್ನು ಸಮಾಜಕ್ಕೆ ಮುಡುಪಾಗಿರಿಸಿದ್ದಾರೆ. ಪ್ರಾಮಾಣಿಕತೆ, ಪಾರದರ್ಶಕತ್ವದ ನಡೆ ಎಲ್ಲರಿಗೂ ಮಾದರಿಯಾಗಿದೆ. ಭವಿಷ್ಯತ್ತಿನುದ್ದಕ್ಕೂ ನಾವು ಈ ರಾಷ್ಟ್ರದಲ್ಲಿ ಅಲ್ಪ ಸಂಖ್ಯಾಕರೆಣಿಸದೆ ತಮ್ಮ ಸಾಂಘಿಕ ಬದುಕನ್ನು ಬಲಪಡಿಸಿ ರಾಷ್ಟ್ರ ಸೇವೆಗಾಗಿ ಮುಡುಪಾಗಿರಿಸಬೇಕು. ಮೊಡೇಲ್ ಬ್ಯಾಂಕ್‍ನ 97ರ ಸುದೀರ್ಘವಾದ ಸೇವಾ ಸಾಧನೆ ಮಹತ್ವಪೂರ್ಣವಾದದ್ದು. ಸುಮಾರು ಹತ್ತು ದಶಕಗಳ ಸೇವೆಯಲ್ಲಿ ಎಲ್ಲಾ ಪಂಥಾಹ್ವಾನಗಳನ್ನು ದಿಟ್ಟತನದಿಂದ ಎದುರಿಸಿ ಮುನ್ನಡೆದು ಬಂದಿರುವುದೇ ಅತ್ಯಂತ ಮಹಾನ್ ಸಾಧನೆ. ಹಣಕಾಸು ಸಂಸ್ಥೆಗಳು ವ್ಯವಹಾರದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ಸಾರ್ಥಕ ಅಸ್ತಿತ್ವ ನೀಡಿದಾಗಲೇ ಆರ್ಥಿಕ ಸಂಸ್ಥೆಗಳ ಉನ್ನತಿ ಸಾಧ್ಯ. ಶತಮಾನದ ಸೇವೆ ಶ್ರೇಷ್ಠತೆ ತೋರುವ ಸಾಧನೆಯಾಗಿದೆ. ಸಾರ್ವಜನಿಕರ ಸೇವೆಯಲ್ಲಿ ವಿಶ್ವಾಸ ಬೆಳೆಸಿ ಈ ಬ್ಯಾಂಕ್ ನೂರಾರು ಶತಾಬ್ದಿಗಳನ್ನು ಕಾಣುವಂತಾಗಲಿ ಎಂದರು.
ರೆ| ಫಾ| ಲ್ಯಾನ್ಸಿ ಜೋನ್ ರೋಸ್ ಪೂಜೆಯಲ್ಲಿ ಸಹಭಾಗಿತ್ವ ವಹಿಸಿದ್ದು, ಕೆನೆಥ್ ಸಿಕ್ವೇರಾ ಮತ್ತು ಬಳಗ ಅವರು ಪೂಜಾ ಭಕ್ತಿಗೀತೆಗಳಿಗೆ ಸಹಯೋಗವನ್ನಿತ್ತರು.
ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರುಗಳಾದ ಪ್ರೊ| ಎ.ಪಿ.ಡಿ’ಸೋಜಾ, ಅಬ್ರಹಾಂ ಕ್ಲೇಮೆಂಟ್ ಲೊಬೋ, ಲಾರೇನ್ಸ್ ಡಿ’ಸೋಜಾ, ತೋಮಸ್ ಡಿ.ಲೋಬೊ, ವಿನ್ಸೆಂಟ್ ಮಥಾಯಸ್, ಲಾಜರಸ್ ಮಿನೇಜಸ್, ಪೌಲ್ ನಝರೆತ್, ಫಿಲಿಪ್ ಎಲ್.ಎಸ್ ಪಿಂಟೋ, ಸಂಜಯ್ ಶಿಂಧೆ, ನ್ಯಾ| ಪಿಯುಸ್ ವಾಸ್, ಶ್ರೀಮತಿ ಮಾರಿಯೆಟ್ ಡಿ’ಸಿಲ್ವಾ, ಶ್ರೀಮತಿ ಬೆನೆಡಿಕ್ಟಾ ರೆಬೆಲ್ಲೋ, ರೋನಾಲ್ಡ್ ಹೆಚ್.ಮೆಂಡೋನ್ಸಾ, ಜೋರ್ಜ್ ಕಾಸ್ತೇಲಿನೋ ಮತ್ತು ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್. ಡಿ’ಸೋಜಾ ವೇದಿಕೆಯಲ್ಲಿ ಅಸೀನರಾಗಿದ್ದರು.
ಇದೇ ಸಂದರ್ಭದಲ್ಲಿ ಬಿಷಪ್ ರೈ| ರೆ| ಜೆರಾಲ್ಡ್ ಅಲ್ಮೇಡಾ ಮತ್ತು ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ ಅವರನ್ನು ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿ’ಸೋಜಾ ಪುಷ್ಪಗುಚ್ಛ ನೀಡಿ ಸತ್ಕರಿಸಿದರು.
ಸಭೆಯಲ್ಲಿ ಹಿರಿಯ ಪ್ರಬಂಧಕರುಗಳಾದ ಝೆನೆರ್ ಡಿ’ಕ್ರೂಜ್ ಹಾಗೂ ಹಿಲರಿ ಮೆಂಡೊನ್ಸಾ ಬ್ಯಾಂಕ್‍ನ ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು, ಶೇರುದಾರರು, ಹಿತೈಷಿಗಳು ಉಪಸ್ಥಿತರಿದ್ದರು. ಶೇರುದಾರರ ಪರವಾಗಿ ಅನೇಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮಾಹಿತಿಗಳನ್ನೀಡಿ ಈ ಬ್ಯಾಂಕ್ ಜನಪರ ಸ್ಪಂದನೆಯೊಂದಿಗೆ ಪ್ರಗತಿ ಸಾಧಿಸಲಿ ಎಂದರು.
ಬ್ಯಾಂಕ್‍ನ ಮಹಾ ಪ್ರಬಂಧಕ ವಿಲಿಯಂ ಎಲ್.ಡಿ’ಸೋಜಾ ಸೂಚನಾ ಪತ್ರಗಳನ್ನು ಹಾಗೂ ಗತವಾರ್ಷಿಕ ವರದಿಯನ್ನು ವಾಚಿಸಿದರು. ಗತ ಸಾಲಿನಲ್ಲಿ ಸ್ವರ್ಗಸ್ಥರಾದ ಬ್ಯಾಂಕ್‍ನ ನಿರ್ದೇಶಕ ಪ್ರೇಮ್ ಅರನ್ಹಾ ಮತ್ತಿತರ ಸದಸ್ಯರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು. ಎಡ್ವರ್ಡ್ ರಾಸ್ಕಿನ್ಹಾ ಸಭಾ ಕಲಾಪ ನಿರ್ವಾಹಿಸಿದ್ದು, ಹೆಚ್ಚುವರಿ ಪ್ರಧಾನ ಪ್ರಬಂಧಕ ಹರೋಲ್ಡ್ ಎಂ.ಸೆರಾವೋ ವಂದನಾರ್ಪಣೆ ಸಲ್ಲಿಸಿದರು.



















