ವಿಟ್ಲ: ಶ್ರೀ ದುರ್ಗಾ ಪರಮೇಶ್ವರಿ ಮಳೆಗಾಲದ ತಿರುಗಾಟದ ಯಕ್ಷಗಾನ ಚಿಕ್ಕ ಮೇಳ ಕನ್ಯಾನ- ಇವರು ಕುಂಡಡ್ಕ ಕೊರಗ ಪೂಜಾರಿಯವರ ಮನೆಯಲ್ಲಿ “ವೀರ ಅಭಿಮನ್ಯು” ಎಂಬ ಕಲಾಸೇವೆಯನ್ನು ದಿನಾಂಕ 06-08-2015 ರಂದು ನಡೆಸಿದರು. ಹಿಮ್ಮೇಳದಲ್ಲಿ ಶುಬಾಸ್ ಪಂಚ ಮತ್ತು ಮೋಹನ್ ಕಲಾವಿದರಾಗಿ ಗಿರೀಶ್ ನಡಿಕಲ್ಲು, ಜಗದೀಶ ಕನ್ಯಾನ, ಗಣೇಶ ಓಜಾಲ, ಹರ್ಷ ಪುತ್ತೂರು, ಅವಿನಾಶ್ ಆಚಾರ್ಯ ಸಹಕರಿಸಿದರು.
ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಪಂಚಾಯತ್ ಸದಸ್ಯ ಯತೀಶ ಪೂಜಾರಿ ವಂದಿಸಿದರು.
