ಗುಜರಾತ್: ಬಹುಶಃ ಹುಚ್ಚಭಿಮಾನ ಎಂದರೆ ಇದೇ ಇರಬಹುದು. ವಾರಣಾಸಿಯಲ್ಲೊಬ್ಬ ಕಾಂಗ್ರೆಸ್ ಅಭಿಮಾನಿ ಇದ್ದಾನೆ. ಮಾಮೂಲು ಅಭಿಮಾನಿಗಳಂತಲ್ಲದ ಈತ ಒಂದು ಸ್ವಲ್ಪ ಡಿಫರೆಂಟ್ ಆಗಿದ್ದಾನೆ.
ವಾರಣಾಸಿಯ ವಾಸಿಯಾಗಿರುವ ಗುಲಾಬ್ ಸೋನಕರ್‌ಗೆ ಕಾಂಗ್ರೆಸ್, ಅದರಲ್ಲೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಎಂದರೆ ಪಂಚಪ್ರಾಣ. ಇವರು ವರ್ಷದ 365 ದಿನವೂ ಕಾಂಗ್ರೆಸ್ ಧ್ವಜವನ್ನು ಕೈಯಲ್ಲಿ ಹಿಡಿದು ಕೊಂಡು ಅಲೆದಾಡುತ್ತಿರುತ್ತಾರೆ. ಚುನಾವಣೆ ಇದ್ದರೂ, ಇರದಿದ್ದರೂ ಇವರ ಕಾಯಕ ಇದೇ. ಅವರ ಧ್ವಜದ ಮೇಲೆ ಸೋನಿಯಾ ಮತ್ತು ರಾಹುಲ್ ಗಾಂಧಿ ಚಿತ್ರವಿದೆ. 

 

ಕಾಂಗ್ರೆಸ್ಸಿನ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಕೇವಲ ಕಾಂಗ್ರೆಸ್ ಪಕ್ಷದ ಭಕ್ತರು. ಹೀಗೆ ಯಾಕೆ ಎಂದು ಕೇಳಿದರೆ ಅವರು ಕಾಂಗ್ರೆಸ್‌ನಿಂದ ಮಾತ್ರ ದೇಶವನ್ನು ನಡೆಸಲು ಸಾಧ್ಯ ಎಂದವರು ಹೇಳುತ್ತಾರೆ. ಅವರು ಒಂಥರಾ ಅಂಧಾಭಿಮಾನಿ. ಕೇವಲ ರಾಹುಲ್ ಅಥವಾ ಸೋನಿಯಾ ದೇಶದ ಪ್ರಧಾನಿಯಾದರೆ ಮಾತ್ರ ಚಪ್ಪಲಿ ಧರಿಸುವುದಾಗಿ ಅವರು ಶಪಥ ಮಾಡಿದ್ದಾರೆ. ಇಂಥ ಅಭಿಮಾನಿಗಳನ್ನು ಕಂಡ ನಂತರವಾದರೂ ಸದ್ಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬಹುದು ಎಂದು ಅಂದಾಜಿಸಲಾಗಿರುವ ಕಾಂಗ್ರೆಸ್ ಗೆ ತುಸು ಸಾಂತ್ವಾನ ದೊರೆಯಬಹುದು.

By suddi9

Leave a Reply

Your email address will not be published. Required fields are marked *