ಮುಂಬೈ: ಸಮಾಜವಾದಿ ಪಕ್ಷದ ಧುರೀಣ ಅಬು ಅಜ್ಮಿ ಸೊಸೆ ಆಯಿಷಾ ಟಾಕಿಯಾ ತನ್ನ ಮಾವನ ಹೇಳಿಕೆ ನನಗೆ ಮತ್ತು ನನ್ನ ಪತಿ ಫರ್ಹಾನ್ ಗೆ ತೀವ್ರ ಬೇಸರ, ದುಃಖ ಹಾಗೂ ನಾಚಿಕೆಯನ್ನುಂಟು ಮಾಡಿದೆ ಎಂದು ಬಾಲಿವುಡ್ ನಟಿ ಆಯಿಷಾ ಟಾಕಿಯಾ ವಿಷಾಧಿಸಿದ್ದಾರೆ. ಅತ್ಯಚಾರದ ಬಗ್ಗೆ ನನ್ನ ಮಾವನವರು ನೀಡಿರುವ ಹೇಳಿಕೆ ನಿಜವೇ ಆಗಿದ್ದರೆ ಅದು ಬಹಳ ಖೇದಕರವಾದ ಸಂಗತಿ. ನಾನು ಮತ್ತು ನನ್ನ ಪತಿ ಅವರ ಮಾತನ್ನು ಒಪ್ಪುವುದಿಲ್ಲ.

ayasha

ಅವರು ಮಹಿಳೆಯರ ವಿರುದ್ಧ ನೀಡಿರುವ ಹೇಳಿಕೆ ಖಂಡನೀಯ. ಅವರು ನೇರವಾಗಿ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಟಾಕಿಯಾ ಆರೋಪಿಸಿದ್ದಾರೆ. ಅತ್ಯಾಚಾರ ಮಾಡುವುದು ಮಹಾಪಾಪ. ಅದನ್ನು ಯಾವ ರೀತಿಯಲ್ಲೂ ಸಮರ್ಥಿಸುವುದು ಅಸಾಧ್ಯ ಆದರೆ ಮಾವ ಅಬು ಅಜ್ಮಿ ಯಾಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಯದು ಎಂದು ಅಬು ಅಜ್ಮಿಯವರ ಮಗ ಫರ್ಹಾನ್ ಅಜ್ಮಿಯನ್ನು ವಿವಾಹವಾಗಿರುವ ಆಯಿಷಾ ಟಾಕಿಯಾ ಖೇದ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *