ಬಂಟ್ವಾಳ : ಬೆಂಗಳೂರಿನ ಆರ್ಯಭಟ ಸಾಂಸ್ಕ್ರತಿಕ ಸಂಸ್ಥೆ ವತಿಯಿಂದ, ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಆರ್ಯಭಟ ಸಾಂಸ್ಕøತಿಕ ಉತ್ಸವದಲ್ಲಿ ಬಂಟ್ವಾಳದ ಖ್ಯಾತ ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರಿಗೆ ಆರ್ಯಭಟ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

prashasthiಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಡಾ|ಎಂ.ರಾಮಾ ಜೋಯಿಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ|ಮಹೇಶ್ ಜೋಶಿ, ಬೆಂಗಳೂರು ನಗರ ನಿವೃತ್ತ ಪೊಲೀಸ್ ಆಯುಕ್ತ ಬಿ.ಜಿ.ಜ್ಯೋತಿಪ್ರಕಾಶ್ ಮಿರ್ಜಿ , ಉದಯವಾಣಿ ಸ್ಥಾನೀಯ ಸಂಪಾದಕ ರವಿ ಹೆಗ್ಡೆ , ಆರ್ಯಭಟ ಸಾಂಸ್ಕ್ರತಿಕ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ಡಾ|ಎಚ್.ಎಲ್.ಎನ್.ರಾವ್ ಅವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *