ಬಂಟ್ವಾಳ: ವಿಟ್ಲದ ಶಾಂತಿನಗರದ ಅಕ್ಷಯ ಸಭಾ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಮಹಿಳಾ ಘಟಕದ ವತಿಯಿಂದ `ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಲಿಂಗಪ್ಪ ಗೌಡ ಅಳಿಕೆ ಇವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಿಟ್ಲ ಸಮುದಾಯ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕಿ ಶಶಿಕಲಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಮಹವೀರ ಆಸ್ಪತ್ರೆಯ ಡಾ| ಅನುಪಮಾ ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಧರ್ಮಾವತಿ ಪಿ ಬಿ ಗೌಡ ಪೂರ್ಲುಪ್ಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಜಲಜಾಕ್ಷಿ ಪೊನ್ನೆತ್ತಡಿ ವಂದಿಸಿದರು. ಜಯಂತಿ ರೆಂಜಾಡಿ ನಿರೂಪಿಸಿದರು. ಬಳಿಕ ಆಟಿಯ ವಿಶೇಷ ಖಾದ್ಯಗಳ ಭೋಜನ ಕಾರ್ಯಕ್ರಮ ನಡೆಯಿತು
