ಬಂಟ್ವಾಳ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘ 2015ನ್ನು ರಜತವರ್ಷಚಾರಣೆ ಯನ್ನಾಗಿ ಆಚರಿಸಲು ನಿರ್ಧರಿಸಿದೆ. ಗ್ರಾಮೀಣ ಪತ್ರಕರ್ತರ ಸಂಘವಾಗಿ 1990 ರಲ್ಲಿ ಆರಂಭಗೊಂಡು ಬಳಿಕ ತಾಲೂಕು ಪತ್ರಕರ್ತರ ಸಂಘವಾಗಿ ಇದೀಗ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವಾಗಿ ಮುನ್ನಡೆಯುತ್ತಿದ್ದು, ಇದೇ ತಿಂಗಳಾಂತ್ಯದಲ್ಲಿ ರಜತವರ್ಷಾಚರಣೆಗೆ ಚಾಲನೆ ದೊರೆಯಲಿದೆ.
Untitled-1 copyಸೋಮವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್‍ನಲ್ಲಿ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಜತವರ್ಷ ಆಚರಣಾ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಹಾಗೂ ಕಾರ್ಯದರ್ಶಿಯಾಗಿ ಸಂದೀಪ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ. ಗ್ರಾಮೀಣ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾದ ಬಾಲಕೃಷ್ಣ ಗಟ್ಟಿ ಯವರನ್ನು ಸಮಿತಿಯ ಗೌರವಾಧ್ಯಕ್ಷರಾಗಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಸಮಿತಿಯ ಸಂಚಾಲಕರಾಗಿ ಹರೀಶ್ ಮಾಂಬಾಡಿ, ವೆಂಕಟೇಶ್ ಬಂಟ್ವಾಳ, ಕೋಶಾಧಿಕಾರಿಯಾಗಿ ಕಿಶೋರ್ ಪೆರಾಜೆ, ಉಪಾಧ್ಯಕ್ಷರಾಗಿ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಸೂರ್ಯನಾರಾಯಣ ಪೂವಳ, ಸ್ಥಾಪಕ ಸದಸ್ಯ ಹಮೀದ್ ವಿಟ್ಲ, ಸಂಘಟನಾ ಕಾರ್ಯದರ್ಶಿಯಾಗಿ ನಿಶಾಂತ್ ಬಿಲ್ಲಂಪದವು, ಕಾರ್ಯದರ್ಶಿಯಾಗಿ ವಿಷ್ಣುಗುಪ್ತ ಪುಣಚ, ಚಂದ್ರಶೇಖರ ಕಲ್ಮಲೆ, ಮಹಮ್ಮದ್ ಆಲಿ ಯವರನ್ನು ಆಯ್ಕೆಮಾಡಲಾಯಿತು. ಕ್ರೀಡಾಕಾರ್ಯದರ್ಶಿಯಾಗಿ ಯಾದವ ಅಗ್ರಬೈಲು, ವಾಮನ ಪೂಜಾರಿ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ರತ್ನದೇವ್ ಪೂಂಜಾಲಕಟ್ಟೆ, ಜನಾರ್ಧನ ವಿಟ್ಲ,ಸುಕುಮಾರ್ ಬಂಟ್ವಾಳ್ ಹಾಗೂ ಚಂದ್ರಹಾಸ ನೂರ್ತಾಡಿಯವರನ್ನು ಆಯ್ಕೆ ಮಾಡಲಾಯಿತು. ರಜತವರ್ಷದ ಸ್ಮರಣ ಸಂಚಿಕೆ ಸಂಚಾಲಕರಾಗಿ ಗೋಪಾಲ್ ಅಂಚನ್ ಹಾಗೂ ಉದಯಶಂಕರ್ ನೀರ್ಪಾಜೆಯವರನ್ನು ಆಯ್ಕೆಮಾಡಲಾಯಿತು. ಸಂಘದ ಸ್ಥಾಪಕ ಸದಸ್ಯರನ್ನು ಹಾಗೂ ತಾಲೂಕಿನ ಹಿರಿಯ ಪತ್ರಕರ್ತರನ್ನು ಸಮಿತಿಗೆ ಗೌರವ ಸಲಹೆಗಾರರನ್ನಾಗಿ ನೇಮಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ರಜತವರ್ಷಾಚರಣೆಯ ಅಂಗವಾಗಿ ಸಮಿತಿ, ಸಂಘ ಹಾಗೂ ಪ್ರೆಸ್ ಕ್ಲಬ್ ಜಂಟಿಯಾಗಿ ತಾಲೂಕಿನಾದ್ಯಂತ ವಿವಿದ ಸಾಮಾಜಿಕ,ಸಾಹಿತ್ಯಿಕ, ಸಾಂಸ್ಕøತಿಕ, ಕ್ರೀಡೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತಾಗಿ ಸಭೆ ತೀರ್ಮಾನಿಸಿತು. ಸಂಘದ ಪ್ರಧಾನಕಾರ್ಯದರ್ಶಿ ನಿಶಾಂತ್ ಬಿಲ್ಲಂಪದವು ಸ್ವಾಗತಿಸಿ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗೋಪಾಲ್ ಅಂಚನ್ ವಂದಿಸಿದರು.

By Suddi9

Leave a Reply

Your email address will not be published. Required fields are marked *