ಬಂಟ್ವಾಳ: ವಿವಿಧ ಕಾರಣಗಳಿಗೆ ವ್ಯಕ್ತಿ ಕುಡಿತದ ದಾಸನಾಗುತ್ತಾನೆ. ಆದರೆ ಅದರಿಂದ ಮುಕ್ತನಾಗ ಬೇಕಾದರೆ ಚಟದ ಹಿಂದಿನ ಮೂಲವನ್ನೇ ಹುಡಕ ಬೇಕು. ಇಂದು, ನಾಳೆ ಅಲ್ಲದಿದ್ದರೂ ಮುಂದಿನ 10, 15 ವರ್ಷದ ಬಳಿಕವಾದರೂ ಕುಡಿತ ಮುಕ್ತ ಸ್ವಸ್ಥ ಸಮಾಜವನ್ನು ನಿರ್ಮಿಸಲು ಮದ್ಯವರ್ಜನ ಶಿಬಿರಗಳು ವೇದಿಕೆಯಾಗ ಬೇಕು ಎಂದು ಚೌಟ ಗ್ಯಾಸ್ ಏಜೆನ್ಸಿ ಮಾಲಕ ಜಗನ್ನಾಥ ಚೌಟ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕಲ್ಲಡ್ಕ ವಲಯ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪಾಣೆಮಂಗಳೂರಿನ ಸತ್ಯಶ್ರೀ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ 852ನೇ ಮದ್ಯ ವರ್ಜನ ಶಿಬಿರದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
BTW_AUG10_4ಪ್ರಸಾದ್ ವುಡ್‍ವಕ್ರ್ಸ್‍ನ ಮಾಲಕ ರಿತೇಶ್ ಬಾಳಿಗ, ವೀರಕಂಬ ಗ್ರಾ,ಪಂ.ಅಧ್ಯಕ್ಷೆ ಪ್ರೇಮಲತಾ, ಬೋಳಂತೂರು ಗ್ರಾ.ಪಂ.ಉಪಾಧ್ಯಕ್ಷ ಚಂದ್ರಶೇಖರ ರೈ, , ಡಾ. ಶಿವಪ್ರಸಾದ್ ಶೆಟ್ಟಿ, ಬಿರ್ವ ಸೆಂಟರ್ ಮಾಲಕ ಸಂಜೀವ ಪೂಜಾರಿ, ಇಂಡಿಯನ್ ಆಯಿಲ್‍ನ ಡೀಲರ್ ಐತಪ್ಪ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ, ಗೌರವಾಧ್ಯಕ್ಷ ರುಕ್ಮಯ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರಂದರ ಸ್ವಾಗತಿಸಿ, ಮಾಲತಿ ನೆಟ್ಲ ವಂದಿಸಿದರು. ರಾಜೇಶ್ ಕೊಟ್ಟರಿ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *