ಬಂಟ್ವಾಳ: ಮಂಗಳೂರಿನ ಎಂ.ಫ್ರೆಂಡ್ಸ್ ವತಿಯಿಂದ ಹೋಪ್ ಪೌಂಡೇಷನ್ ಮಂಗಳೂರು, ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಬಿ.ಸಿ.ರೋಡು, ಸುರಿಬೈಲು ಹಿ.ಪ್ರಾ.ಶಾಲೆಯ ಸಹಯೋಗದೊಂದಿಗೆ ಉಚಿತ ಕಣ್ಣು ಪರೀಕ್ಷೆ ಹಾಗೂ ಕಣ್ಣಿನ ಪೊರೆ ತಪಾಸಣೆಯು ಆ.9 ರ ಭಾನುವಾರ ಬೆಳಿಗ್ಗೆ 9 ರಿಂದ 12.30ರ ವರೆಗೆ ಸುರಿಬೈಲು ಶಾಲಾ ಆವರಣದಲ್ಲಿ ನಡೆಯಲಿದೆ.
ಜಿ.ಪಂ.ಸದಸ್ಯ ಎಂ.ಎಸ್.ಮಮ್ಮದ್ ಶಿಬಿರ ಉದ್ಘಾಟಿಸಲಿದ್ದು, ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ, ಸಾರ್ವಜನಿಕರು ಶಿಬಿರದ ಉಪಯೋಗ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ
