ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತಿಗೆ ಒಳಪಟ್ಟ ಕಾಂಜಿಲಕೋಡಿ ನೂಯಿ ಎಂಬಲ್ಲಿ ಅಲ್-ಬದ್ರುಲ್ ಹುದಾ ಜುಮಾ ಮಸೀದಿಗೆ ಶಿಲಾನ್ಯಾಸವನ್ನು ಅಲ್ ಹಾಜಿ ಮೌಲಾನಾ ಅಬ್ದುಲ್ ರಝಾಕ್ ಮಲೇಸಿಶಿಯಾ ಅವರು ಆ.7ರಂದು ಶುಕ್ರವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳ ದಾನಿಗಳಾದ ಎಮ್ ಎ.ಹಾಮದ್ ಬಾವ ಅಡ್ಡೂರು ಪೊನ್ನೆಲ, ಅಧ್ಯಕ್ಷರಾದ ಹಾಜಿ ಎಮ್ ಎಚ್ ಮಯ್ಯದ್ದಿ ಪಂಚಾಯತಿ ಸದಸ್ಯರಾದ ಎಕೆ ರಿಯಾದ್ ಎಕೆ ಜಬ್ಬಾರ್ ಖತೀಬರಾದ ಎಸ್ ಬಿ ಯುಸ್ಫ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.




