ಬಂಟ್ವಾಳ : ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ಜಿಲ್ಲೆ – 317ಡಿ ಪ್ರಾಂತ್ಯ 7ರ ಪ್ರಾಂತೀಯ ಅಧ್ಯಕ್ಷರಾಗಿ ಲಯನ್ಸ್ ಕ್ಲಬ್ ಬಂಟ್ವಾಳದ ಪೂರ್ವಾಧ್ಯಕ್ಷ ದಾಮೋದರ ಬಿ. ಎಂ. ಮಾರ್ನಬೈಲು ಇವರು ಆಯ್ಕೆಗೊಂಡಿರುತ್ತಾರೆ.
6x4ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಸೇವಾ ಪ್ರತಿಷ್ಠಾನದ ಟ್ರಸ್ಟಿಯಾಗಿ, ಲಯನ್ ಸೇವಾ ಟ್ರಸ್ಟ್ ಬಂಟ್ವಾಳದ ಕೋಶಾಧಿಕಾರಿಯಾಗಿ ಹಾಗೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಮೆಲ್ಕಾರ್‍ನಲ್ಲಿ ಪ್ರಿಂಟಿಂಗ್ ಉದ್ಯಮ ನಡೆಸುತ್ತಿದ್ದು, ಆಗಸ್ಟ್ 1ರಂದು ಮಂಗಳೂರಿನ ಟಿ. ಎಂ. ಎ. ಪೈ. ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಪ್ರಾಂತೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಈ ಹಿಂದೆ ಇವರು ಲಯನ್ಸ್ ವಲಯಾಧ್ಯಕ್ಷರಾಗಿ, ಜಿಲ್ಲಾ ಸಂಯೋಜಕರಾಗಿ, ಲಯನ್ಸ್ ಮಂಗಳದ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

By Suddi9

Leave a Reply

Your email address will not be published. Required fields are marked *