ಬಂಟ್ವಾಳ: ನಾವು ನಮ್ಮ ಮನೆಯನ್ನು ಸ್ವಚ್ಛಗೊಳಿಸುವ ಮೂಲಕ ನಮ್ಮ ಪರಿಸರವನ್ನು ಸ್ವಚ್ಛ ಗೊಳಿಸಿದಾಗ ಸ್ವಚ್ಛತೆಯ ಅರಿವು ಮೂಡುತ್ತದೆ . ಆ ಮೂಲಕ ದೇಶವೇ ಸ್ವಚ್ಛ ಆಗುತ್ತದೆ. ಅದಕೋಷ್ಕರವಾಗಿ ಪೂಜ್ಯ ಒಡಿಯೂರು ಶ್ರೀಗಳು ಸ್ವಚ್ಛತಾ ಆಂದೋಲನವನ್ನು ನೆರವೇರಿಸುತ್ತಿದ್ದಾರೆ ಎಂದು ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಕೊಂಚಾಡಿ ಘಟಸಮಿತಿಯ ವತಿಯಿಂದ ಆಕಾಶಭವನದ ಪರಪಾದೆ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ ತಿಳಿಸಿದರು.
ಒಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ (ನಿ)ದ ನಿರ್ದೆಶಕರಾದ ಎಚ್.ಕೆ ಪುರುಷೋತ್ತಮ್‍ರವರು ಮಾತಾನಾಡುತ್ತಾ ಸ್ವಾಮೀಜಿಯವರ ಹುಟ್ಟುಹಬ್ಬ ಕೇವಲ ಭಕ್ತರಿಗೆ ಮಾತ್ರ ಸೀಮಿತವಾಗಬಾರದು ಎಲ್ಲಾ ಜನತೆಗೆ ಸೀಮಿತವಾಗಿರಬೇಕು. ಹಾಗೂ ಸಾಮಾಜಿಕ , ಆರ್ಥಿಕ ,ಉನ್ನತಿಗಾಗಿ ನಮ್ಮ ಕಷ್ಟಕ್ಕೆ ಸ್ಪಂದನೆ ಕೊಡುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದರು. ಸಾಲ್ಯಾನ್ ಪ್ರಿಂಟರ್ ಮಾಲಕ ಭಾಸ್ಕರ ಸಾಲ್ಯನ್ ಪ್ರಧಾನ ಮಂತ್ರಿಯಾದ ನರೇಂದ್ರಮೋದಿ ದೇಶದೆಲ್ಲೆಡೆ ಕಾರ್ಯಕ್ರಮ ಮಾಡಬೇಕೆಂದರು ಹಾಗೂ ಸ್ವಾಮೀಜಿಯವರು ಸುಮಾರು ಹದಿನೈದು ವರ್ಷದ ಹಿಂದೆಯೇ ಈ ಸ್ವಚ್ಛತಾ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಮಾಡಿಕೊಂಡು ಬಂದಿರುತ್ತಾರೆ ಮತ್ತು ಪರಿಸರವನ್ನು ಸ್ವಚ್ಛವಾಗಿಸಿ ಗಿಡಗಳನ್ನು ಬೆಳೆಸಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ, ಘಟಸಮಿತಿಯ ಅಧ್ಯಕ್ಷರಾದ ಸರಸ್ವತಿ, ಉಪಸ್ಥಿತರಿದ್ದರು.
ವಿಕಾಸವಾಹಿನಿ ಸ್ವ ಸಹಾಯ ಸಂಘದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಸೇವಾದೀಕ್ಷಿತೆ ಸುಮತಿ , ಸುಮಿತ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತಿಯವರು ವಂದಿಸಿ , ಗ್ರಾಮಸಂಯೋಜಕಿ ಸಬಿತಾ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *