ಬಂಟ್ವಾಳ: ರೋಟರಿ ಕ್ಲಬ್ ವಿಟ್ಲ ಇದರ 2015-16 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಗಜಾನನ ಸಭಾಭವನದಲ್ಲಿ ಜು.29 ಬುಧವಾರ ನೂತನ ಅಧ್ಯಕ್ಷ ಡಿ ಬಿ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ಸಿಟಿ ರೋಟರಿ ಕ್ಲಬ್‍ನ ಅಧ್ಯಕ್ಷ ಹೆಚ್ ನಟೇಶ್ ಉಡುಪ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.

SHV_5342
ಮುಖ್ಯ ಅತಿಥಿಗಯಾಗಿ ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿ ವಿ ವಿ ಭಟ್ ಐ.ಎ.ಎಸ್, ಭಾಗವಹಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ರಾಮಕೃಷ್ಣ ಮಲ್ಲಾರ, ಸಂತೋಷ್ ಶೆಟ್ಟಿ ಎಸ್ ಮತ್ತು ಜಯಕುಮಾರ್ ರೈ ಎಂ ಆರ್ ಭಾಗವಹಿಸಿದ್ದರು. ನಿರ್ಗಮನ ಅಧ್ಯಕ್ಷ ಜೆಡ್ಡು ಗಣಪತಿ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್ ಎ ರಹಿಮಾನ್ ವಂದಿಸಿದರು. ರಶೀದ್ ವಿಟ್ಲ ಹಾಗೂ ಅಬ್ದುಲ್ ರಹಿಮಾ£ಲ್ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *