ಬಂಟ್ವಾಳ: ಬೊಲ್ಪು ಕಲಾ ತಂಡದ “ಆರೋಗ್ಯದೆಡೆಗೆ ನಮ್ಮ ನಡಿಗೆ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಂಚಿ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಇವರನ್ನು ತಂಡದ ವತಿಯಿಂದ ಜು.26 ರಂದು ಭಾನುವಾರ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷ ಡಿ.ಕೆ. ಹಂಝ, ಶಾಲಾ ಮುಖ್ಯೋಪಾಧ್ಯಾರಾದ ಹನುಮಂತಪ್ಪ ಭಜಂತ್ರಿ, ತಂಡದ ಅಧ್ಯಕ್ಷ ಅಶೋಕ ಬಿ, ಕಾರ್ಯಾಧ್ಯಕ್ಷ ಆನಂದ ಕುಕ್ಕಾಜೆ ತಂಡದ ಸದಸ್ಯರಾದ ಶ್ರೀಮತಿ ಯಶೋಧ, ಶ್ರೀಮತಿ ವಿಜಯ ಕುಮಾರಿ, ಸಂಚಾಲಕ ಕೊರಗಪ್ಪ ಶಿಂಗಾರಕೋಡಿ ಉಪಸ್ಥಿತರಿದ್ದರು.
