ಮುಂಬಯಿ:ಜು.31: ಹಿಂದೂಸ್ಥಾನದಲ್ಲಿನ ಪುಣ್ಯಪುರುಷರು, ಸಾಧುಸಂತರು ತಮ್ಮ ಧರ್ಮದ ತತ್ವಗಳನ್ನು ಜನಸಾಮಾನ್ಯರಿಗೆ ಪೂರ್ವಜರ ಮಾರ್ಗದರ್ಶನ ದೊಂದಿಗೆ ಕಾಲಕಾಲಕ್ಕೆ ಅರಿವು ಮೂಡಿಸುತ್ತಾ ಭಕ್ತರ ಬಾಳನ್ನು ಬೆಳಗಿಸುವಲ್ಲಿ ಸಫಲರಾಗಿದ್ದಾರೆ. ಗುರು ಎಂದರೆ ಅಜ್ಞಾನದ ಕತ್ತಲು ನಿವಾರಕ ಎಂದಾರ್ಥ. ಗುರು ಎಂದರೆ ಕನಿಷ್ಠ ಅಲ್ಲ ಜೇಷ್ಠ ಎಂದರ್ಥ. ಗುರು ಜೀವನ ಕೊಡಬಲ್ಲವರು. ಗುರುಪೂರ್ಣಿಮೆಯು ವ್ಯಾಸಪೂರ್ಣಿಮೆ ಎಂಬ ಪ್ರಚಲಿತದಲ್ಲಿದೆ. ವ್ಯಾಸರನ್ನು ಸ್ಮರಣೀಸುವ ದಿನ ಇದಾಗಿದೆ. ಗುರು ಎಂದರೆ ಧರ್ಮ ಸಂಸ್ಕೃತಿಯ ರಕ್ಷಕರಾಗಿದ್ದು ಭಾರತದಲ್ಲಿ ಗುರುಸ್ಥಾನವು ಅತ್ಯಂತ ಪವಿತ್ರ ಸ್ಥಾನ ಪಡೆದಿದೆ. ಆಧ್ಯಾತ್ಮಿಕ ಮತ್ತು ಸಾಮಾಜಿಕ ದೃಷ್ಠಿಗಳಿಂದ ಮಾನವ ಜೀವನಕ್ಕೆ ಬೆಳಕಿನ ಮಾರ್ಗದರ್ಶನ, ಚೇತನ ನೀಡುವ ಪೂಜ್ಯನೀಯರೇ ಗುರುಗಳು. ಗುರುವರ್ಯರಿಗೆ ಭಕ್ತರು ತ್ರಿಕರಣಪೂರ್ವಕವಾದ ಸಹಯೋಗ, ಗೌರವ ಹಾಗೂ ಪೂಜ್ಯತೆಗಳನ್ನು ನೀಡಿ ವಂದಿಸುವುದು ಭಾರತೀಯ ಪರಂಪರೆಯಾಗಿದ್ದು, ಗುರುಗಳೇ ಭಕ್ತಜನತೆಯ ಹೃದಯ ಸಾಮ್ರಾಜ್ಯದ ಆಧ್ಯಾತ್ಮ ಪೀಠಾಧಿಪತಿ ಆಗಿರುತ್ತಾರೆ. ಭಾರತದಲ್ಲಿ ಗುರುಸ್ಥಾನವು ಪರಮೋಚ್ಚಸ್ಥಾನ ಪಡೆದಿದೆ ಎಂದು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರು ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
Odiyoor Gurupoornime-7

Odiyoor Gurupoornime-9

Odiyoor Gurupoornime-13

Odiyoor Gurupoornime-15

Odiyoor Gurupoornime-A1

Odiyoor Gurupoornime-A2

Odiyoor Gurupoornime-C1 (1)

Odiyoor Gurupoornime-C2
ಬಂಟರ ಸಂಘ ಮುಂಬಯಿ, ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕ ಮತ್ತು ಸ್ಥಳೀಯ ಗುರುಭಕ್ತರುಗಳು ಇಂದಿಲ್ಲಿ ಕುಲರ್ಾ ಪೂರ್ವದಲ್ಲಿನ ಬಂಟರ ಭವನದಲ್ಲಿನ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಸಂಭ್ರಮಿಸಿದ ಶ್ರೀ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳು ದೀಪಬೆಳಗಿಸಿ ವಿಧಿವತ್ತಾಗಿ ಸಮಾರಂಭಕ್ಕೆ ಚಾಲನೆಯನ್ನಿತ್ತು ಸದ್ಭಕ್ತರನ್ನುದ್ದೇಶಿಸಿ ನುಡಿದರು.

ಗುರುದೇವಾನಂದಶ್ರೀ ಆಗಮಿಸಿ ಬಂಟರ ಸಭಾಗೃಹದಲ್ಲಿನ ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿ ಪ್ರತಿಮೆಗೆ ಪುಷ್ಫಗೌರವವನ್ನಿತ್ತು ಆರತಿಗೈದು ಗುರುವಂದನೆ ನೆರವೇರಿಸಿದರು. ಬಳಗದ ಅಧ್ಯಕ್ಷ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಮತ್ತು ಶ್ರೀಮತಿ ಕಿಶೋರಿ ಪಿ.ಶೆಟ್ಟಿ ದಂಪತಿ ಹಾಗೂ ಪದಾಧಿಕಾರಿಗಳು ಶ್ರೀಗಳನ್ನು ಕಾರ್ಯಕ್ರಮಕ್ಕೆ ಭಕ್ತಿಪೂರ್ವಕವಾಗಿ ಬರಮಾಡಿದರು.

ಶ್ರೀ ಶಿರ್ಡಿ ಸಾಯಿಬಾಬಾ, ಭಗವನ್ ನಿತ್ಯಾನಂದ ಸ್ವಾಮೀಜಿ ಮತ್ತು ಒಡಿಯೂರು ಶ್ರೀಗಳ ಪ್ರತಿಮೆಗಳಿಗೆ ಪೂಜೆ ನೇರವೇರಿಸಿ ಭಕ್ತರು ಗುರುಪೂರ್ಣಿ ಮೆಯನ್ನು ಆಚರಿಸಿದರು. ಕಾರ್ಯಕ್ರಮದ ಅಂಗವಾಗಿ ಸೇವಾ ಬಳಗದ ಸದಸ್ಯರು, ಶ್ರೀ ವಜ್ರಮಾತಾ ಮಹಿಳಾ ವಿಕಾಸದ ಭಕ್ತೆಯರು ಮತ್ತು ಬಂಟರ ಸಂಘದ ಭಕ್ತವೃಂದವು ಭಜನೆ ಸಂಕೀರ್ತನೆ ನಡೆಸಿತು. ಬಳಿಕ ಭಕ್ತಗಣ್ಯರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮ ನೆರವೇರಿಸಿತು. ಶ್ರೀಗಳು ಮಹಾ ಮಂಗಳಾರತಿ ನೆರವೇರಿಸಿ ಆಶೀರ್ವಚನಗೈದರು. ಪಿ.ಧನಂಜಯ ಶೆಟ್ಟಿ ಮತ್ತು ದಯಾನಂದ ಎಸ್.ಶೆಟ್ಟಿ ಅವರ ಮುಂದಾಳುತ್ವದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ನೆರೆದ ಭಕ್ತರಿಗೆ ಮನೀಷ್ ಕ್ಯಾಟರರ್ಸ್ನ ವಾಮನ ಎಸ್.ಶೆಟ್ಟಿ ವತಿಯಿಂದ ಪ್ರಸಾದರೂಪವಾಗಿ ಅನ್ನಸಂತಾರ್ಪಣೆಗೈದರು.

ಈ ಶುಭವಾಸರದಲ್ಲಿ ಸಂಘದ ಅಧ್ಯಕ್ಷ ಕರ್ನೆರೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್ದಾಸ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಲತಾ ಜಯರಾಮ ಶೆಟ್ಟಿ, ಸೇವಾ ಬಳಗದ ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ಗೌ| ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಕೋಶಾಧಿಕಾರಿ ಬೋಜ ಶೆಟ್ಟಿ, ಜೊತೆ ಕಾರ್ಯದರ್ಶಿ ಗಳಾದ ದಿವಾಕರ್ ಬಿ.ಶೆಟ್ಟಿ ಮತ್ತು ದಾಮೋದರ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷೆ ಶ್ರೀಮತಿ ರೇವತಿ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಆರ್.ಶೆಟ್ಟಿ, ಐಕಳ ವಿಶ್ವನಾಥ ವಿ.ಶೆಟ್ಟಿ, ಸುಹಾಸಿನಿ ಶೆಟ್ಟಿ, ವಾಮಯ್ಯ ಶೆಟ್ಟಿ ಮತ್ತು ಗುರುಭಕ್ತರು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಬಳಗದ ಕೋಶಾಧಿಕಾರಿ ಬೋಜ ಶೆಟ್ಟಿ ದಂಪತಿ ಪಾದ ಪೂಜೆಯನ್ನು ನೇರವೇರಿಸಿದರು ಶ್ರೀ ಸಾದ್ವೀ ಮಾತಾನಂದಮಯಿ ಪ್ರಾರ್ಥನೆ ಹಾಡಿದರು. ಒಡಿಯೂರುನ ಚಂದ್ರಶೇಖರ ಉಪಾಧ್ಯಾಯ ಹಾಗೂ ಸುಬ್ರಹ್ಮಣ್ಯ ಭಟ್ ಪೂಜಾಧಿಗಳನ್ನು ನೆರವೇರಿಸಿ ತೀರ್ಥ-ಪ್ರಸಾದ ವಿತರಿಸಿದರು.

ಕಾರ್ಯಕ್ರಮದಲ್ಲಿ ಬಾಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಕೆ.ಡಿ.ಶೆಟ್ಟಿ, ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಗುರುಭಕ್ತರಾದ ಆನಂದ್ ಶೆಟ್ಟಿ ಭಯಂದರ್, ಸೇರಿದಂತೆ ಸ್ಥಳೀಯ ನೂರಾರು ಗುರುಭಕ್ತರು ಹಾಜರಿದ್ದು ಸತ್ಸಂಗ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿ ಗುರುಕೃಪೆಗೆ ಪಾತ್ರರಾದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *