ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ 2015-16ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ರಾ.ಸೇ.ಯೋ.ಘಟಕದ ಜಂಟಿ ಉದ್ಘಾಟನಾ ಕಾರ್ಯಕ್ರಮ ಸಿದ್ಧಕಟ್ಟೆ ಕಾಲೇಜು ಸಭಾಂಗಣದಲ್ಲಿ ಜು.27ರಂದು ಜರಗಿತು.
2907pkt2
ಕಾಲೇಜು ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿದ್ಯಾಧರ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿ ಸಂಘ ಹಾಗೂ ರಾ.ಸೇ.ಯೋಜನೆಯು ವಿದ್ಯಾರ್ಥಿಗಳಲ್ಲಿ ಸಂಘಟನೆ, ನಾಯಕತ್ವ , ಜೀವನ ಮೌಲ್ಯಗಳು, ಸಹಬಾಳ್ವೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಮೊದಲಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಬಹಳ ಸಹಕಾರಿಯಾಗಿದೆ. ಹಾಗೂ ಪ್ರತಿಯೊಬ್ಬರೂ ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಯರನ್ನು ಪ್ರೀತಿಯಿಂದ ಸಲಹುವ ಜವಾಬ್ದಾರಿಯನ್ನು ಹೊರಬೇಕು. ಆಗ ಮಾತ್ರ ದೇಶದಲ್ಲಿ ವೃದ್ಧಾಶ್ರಮಗಳು,ಅನಾಥಾಲಯಗಳು ಕಣ್ಮರೆಯಾಗಲು ಸಾಧ್ಯ ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲ ಪದ್ಮನಾಭ ರೈ ಎನ್. ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಪ್ರಭು ಅವರು ಮಾತನಾಡಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ತಮ್ಮ ಜೀವನದಲ್ಲಿ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಹಾಗೂ ಯಾರೂ ಕೂಡಾ ದೇಶದ್ರೋಹದ ಕೆಲಸ ಮಾಡಬಾರದು ಎಂದು ಹೇಳಿದರು.
ವಿದ್ಯಾರ್ಥಿ ಗಣೇಶ್ ಅವರು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತೇಶ್ ಕುಮಾರ್ ಪಿ.ಆರ್. ಪ್ರಸ್ತಾವಿಸಿದರು. ವಿದ್ಯಾರ್ಥಿನಿಗಳಾದ ಕು|ಸ್ವಾತಿ ವಂದಿಸಿದರು. ಕು|ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *