ಬಂಟ್ವಾಳ : ಜೋಡುಮಾರ್ಗ ಅಂಚೆಕಛೇರಿಯಲ್ಲಿ 36 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಜೂ.30ರಂದು ಸೇವಾ ನಿವೃತ್ತಿ ಹೊಂದಿರುವ ಅಂಚೆ ಮೇಲ್ವಿಚಾರಕ ಕೃಷ್ಣ ನಾಯಕ್ ಅವರಿಗೆ ವಿದಾಯ ಕಾರ್ಯಕ್ರಮ ಜೋಡುಮಾರ್ಗ ಅಂಚೆಕಛೇರಿಯಲ್ಲಿ ಜರಗಿತು. ಹಿರಿಯ ಅಂಚೆ ಅಕ್ಷಕ ಟಿ.ಜಿ.ನಾಯಕ್ ಅವರು ನಿವೃತ್ತರನ್ನು ಸಮ್ಮಾನಿಸಿ ಶುಭ ಹಾರೈಸಿದರು.
ಉಡುಪಿ ವಿಭಾಗದ ಸಹಾಯಕ ಅಂಚೆ ಅಕ್ಷಕ ನವೀನ್ಚಂದ್ರ, ಬಂಟ್ವಾಳ ವಿಭಾಗದ ಗಣಪತಿ ಮರಡಿ, ಜೋಡುಮಾರ್ಗ ಅಂಚೆ ಪಾಲಕ ಎಂ.ಬಿ.ಶೆಟ್ಟಿ ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.

