ಬಂಟ್ವಾಳ, ಜು. 29: ಸಾಮಾಜಿಕ ಜಾಲ ತಾಣದಲ್ಲಿ ಕಳೆದ ಎರಡು ದಿನಗಳಿಂದ ವ್ಯಕ್ತಿಯೊಬ್ಬರು ದುಬೈಯಲ್ಲಿ ಜೆಟ್ ವಿಮಾನದ ರೆಕ್ಕೆಗೆ ಸಿಲುಕಿ ಸಾವನ್ನಪಿದ್ದಾರೆ ಎಂಬ ಸುದ್ದಿ ಚಿತ್ರ ಹರಿದಾಡುತ್ತಿದ್ದು ಅದು ಸಂಪೂರ್ಣ ಸುಳ್ಳು ಎಂಬುದಾಗಿ ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿದಾಗ ತಿಳಿದು ಬಂದಿದೆ.
ಮೃತ ವ್ಯಕ್ತಿಯ ವಿಳಾಸ, ವೋಟರ್ ಕಾಡರ್್ ಸಹಿತ ವಿವರ ಪ್ರಕಟಿಸಿದ್ದು ಮೊದಲಿಗೆ ಕನರ್ಾಟಕದವರು, ನಂತರ ಕರಾವಳಿ ಪ್ರದೇಶದವರು, ಕೊನೆಗೆ ನಿಖರವಾಗಿ ಬಂಟ್ವಾಳ ತಾಲೂಕು ಪುದು ಗ್ರಾಮ ಫರಂಗಿಪೇಟೆ ಅಮ್ಮೆಮಾರ್ ನಿವಾಸಿ ಎಂದು ಪೋಟೊ ಸಹಿತ ಹರಿದಾಡುತ್ತಿತ್ತು.
ಇದನ್ನೆ ನಂಬಿದ್ದ ಒಂದೆರಡು ಎಲೆಕ್ಟ್ರಾನಿಕ್ ಮಾದ್ಯಮಗಳು ಪೂವರ್ಾಪರ ವಿಚಾರಿಸದೆ ವರದಿಯನ್ನು ಪ್ರಸಾರ ಮಾಡಿಬಿಟ್ಟಿದ್ದವು. ಇದರಿಂದ ಸ್ಥಳೀಯವಾಗಿ ಇನ್ನಷ್ಟು ಗೊಂದಲ ಉಂಟಾಗಿತ್ತು.

ಕೂಲಂಕಷ ತನಿಖೆ ನಡೆಸಿ ಜಾಲತಾಣದಲ್ಲಿ ಪ್ರಕಟಿತ ಫೋಟೊ ಇದ್ದಂತಹ ವ್ಯಕ್ತಿಯ ಬಂಧುಗಳಲ್ಲಿ ಸಂಪಕರ್ಿಸಿ ವಿಚಾರಿಸಿದಾಗ ಅವರು ಫರಂಗಿಪೇಟೆಯಲ್ಲಿ ಅಂಗಡಿಯೊಂದರಲ್ಲಿ ಕರ್ತವ್ಯದಲ್ಲಿ ಇರುವುದು ದೃಢಪಟ್ಟಿದೆ.
ವಿದೇಶಕ್ಕೆ ಹೋಗದೆ ಊರಲ್ಲಿಯೇ ಇರುವ ವ್ಯಕ್ತಿಯು ವಿದೇಶದಲ್ಲಿ ಅದು ಕೂಡಾ ಅತ್ಯಂತ ಭದ್ರತೆಯ ಕಟ್ಟು ನಿಟ್ಟು ಇದ್ದಂತಹ ವಿಮಾನ ನಿಲ್ದಾಣದಲ್ಲಿ ಅದರ ರೆಕ್ಕೆಗೆ ಸಿಕ್ಕಿ ಭಸ್ಮಿಭೂತವಾದ ಚಿತ್ರ ಪ್ರಕಟವಾಗಿದೆ. ಜೊತೆಗೆ ಇನ್ನೊಂದರಲ್ಲಿ ರೆಕ್ಕೆಯ ಸುತ್ತ ರಕ್ತ ಇರುವಂತೆ ಚಿತ್ರಿಸಿ ತೋರಿಸಿದೆ. ಇದನ್ನೇ ಅನೇಕ ಮಂದಿ ಸತ್ಯವೆಂಬಂತೆ ಒಬ್ಬರಿಂದ ಮತ್ತೊಬ್ಬರಿಗೆ ಹಂಚಿಕೊಂಡಿದ್ದಾರೆ. ಸತ್ಯವೆಂದು ವಾದಿಸಿಕೊಂಡ ಘಟನೆಯೂ ನಡೆದಿದೆ.

By Suddi9

Leave a Reply

Your email address will not be published. Required fields are marked *