ಮಕ್ಕಳಲ್ಲಿ ಪರಿಸರದಲ್ಲಿ ಮರಗಿಡಗಳನ್ನು ಪ್ರೀತಿಸುವ, ಪರಿಸರ ಸ್ವಚ್ಛತೆಯನ್ನು ಮೈಗೂಡಿಸುವ ಗುಣಗಳನ್ನು ಬೆಳೆಸಬೇಕು. ಆ ಮೂಲಕ ಪರಿಸರ ಜಾಗೃತಿ ಬೆಳೆಸಬೇಕು ಎಂದು ಸ್ಕೌಟ್ಸ್ &ಗೈಡ್ಸ್ ಜಿಲ್ಲಾ ಚೀಫ್ ಕಮಿಷನರ್ ಎನ್.ಜಿ.ಮೋಹನ್ ವಿಟ್ಲ ಸ್ಥಳೀಯ ಸಂಸ್ಥೆಯ ಮಹಾ ಸಭೆಯಲ್ಲಿ ಸ್ಕೌಟ್ಸ್ &ಗೈಡ್ಸ್ ಶಿಕ್ಷಕರಿಗೆ ಕರೆನೀಡಿದರು.
DSC_0248
ಭಾರತ್ ಸ್ಕೌಟ್ಸ್ &ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಇದರ ಮಹಾ ಸಭೆಯು ದಿನಾಂಕ :27-7-2015ರಂದು ವಿಟ್ಲ ಮಾದರಿ ಹಿ.ಪ್ರಾ.ಶಾಲೆಯ ಶತಮಾನೋತ್ಸವ ಭವನದಲ್ಲಿ ನಡೆಯಿತು.
ಸ್ಥಳೀಯ ಸಂಸ್ಥೆ ಅಧ್ಯಕ್ಷರಾದ ಶ್ರೀ ಪ್ರಭಾಕರಶೆಟ್ಟಿ ದಂಬೆಕಾನ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ, ಕೋಶಾಧಿಕಾರಿ ವಾಸುದೇವ ಬೋಳೂರು, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷರಾದ ಶ್ರೀ ಅನಂತಕೃಷ್ಣ ಹೆಬ್ಬಾರ್, ಯಶವಂತ ವಿಟ್ಲ, ಸುದರ್ಶನ ಪಡಿಯಾರ್, ಸಿ.ಆರ್.ಪಿ ಶಿವರಾಮ ಭಟ್, ಸ್ಕೌಟ್ಸ್ ವಿಶ್ವನಾಥ ಹೆಚ್ , ಗೈಡ್ಸ್ ಜೂಲಿಯಾನಮೇರಿ ಲೋಬೋ, ಕಾರ್ಯದರ್ಶಿ ಬಿ.ವಿಶ್ವನಾಥ ಗೌಡ ಕುಳಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಜತೆಕಾರ್ಯದರ್ಶಿ ಶಾಂತ ಕನ್ಯಾನ ವರದಿ ವಾಚಿಸಿದರು. ನಾರಾಯಣ ನಾಯಕ್ ಅಳಿಕೆ ಧನ್ಯವಾದವಿತ್ತರು. ಸಹಕಾರ್ಯದರ್ಶಿ ಇಸ್ಮಾಯಿಲ್ ಒಕ್ಕೆತ್ತೂರು ಕಾರ್ಯಕ್ರಮ ನಿರ್ವಹಿಸಿದರು

By Suddi9

Leave a Reply

Your email address will not be published. Required fields are marked *