ಬಂಟ್ವಾಳ : ಶಾಲಾ ಕಟ್ಟಡದ ತುತರ್ು ದುರಸ್ತಿಗಾಗಿ ಮೀಸಲಿಟ್ಟ ಶಾಸಕರ ಅನುದಾನದ ಅಸಮರ್ಪಕ ಬಳಕೆಯಿಂದಾಗಿ ಶಾಲಾ ಕಟ್ಟಡವೇ ಕುಸಿಯುವ ಭೀತಿಯನ್ನು ಎದುರಿಸುತ್ತಿರುವ ಘಟನೆ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಬಂಟ್ವಾಳ ಶಾಸಕ ಬಿ. ರಮಾನಾಥ ರೈ ಅವರ ಶಾಲಾ ಕಟ್ಟಡ ತುರ್ತು ದುರಸ್ತಿ ಕಾಮಗಾರಿಗಾಗಿ 32 ಪ್ರಾಥಮಿಕ ಶಾಲೆಗಳು, 5 ಪ್ರೌಢಶಾಲೆಗಳು ಹಾಗೂ ಒಂದು ಪದವಿಪೂರ್ವ ಕಾಲೇಜಿಗೆ ಒಟ್ಟು 40 ಲಕ್ಷ ರೂಪಾಯಿ ಅನುದಾನ ಮಂಜೂರುಗೊಂಡಿದ್ದು, ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗವನ್ನು ಅನುಷ್ಠಾನ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಇದೀಗ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಶಾಲಾ ಕಟ್ಟಡದ ಮಾಡು ದುರಸ್ತಿ ಮಾಡಲು 38 ಶಾಲೆಗಳ ಪೈಕಿ 37 ಶಾಲೆಗಳು ಮುಂದಾಗಲಿಲ್ಲ. ವಿಪರ್ಯಾಸ ಎಂದರೆ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ನ ಸದಸ್ಯರೋರ್ವರ ತರಾತುರಿ ಹಾಗೂ ಸರ್ವಾಧಿಕಾರಿ ಧೋರಣೆಯಿಂದಾಗಿ ಇಲ್ಲಿನ ನೇರಳಕಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಹಂಚು ತೆಗೆದು ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಕಳೆದ 20 ದಿನಗಳಿಂದ ಮಳೆಯ ನೀರು ಶಾಲಾ ಗೋಡೆ ಮತ್ತು ಕೊಠಡಿಯೊಳಗೆ ಬೀಳುತ್ತಿದ್ದು, ಗೋಡೆ ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಿಸುತ್ತಿದೆ.
ಹಂಚು ತೆಗೆಯಲಾದ ಕಟ್ಟಡದಲ್ಲಿ ಮೂರು ತಗರತಿ ಕೋಣೆ ಹಾಗೂ ಒಂದು ದಾಸ್ತಾನು ಕೋಣೆಯಿದ್ದು, ಈ ಮೂರು ತರಗತಿಯ ವಿದ್ಯಾರ್ಥಿಗಳನ್ನು ಉಳಿದ ತರಗತಿ ಕೋಣೆಗಳಿಗೆ ಸೇರಿಸಲಾಗಿದೆ. ಮಳೆಯ ಹಿನ್ನಲೆಯಲ್ಲಿ ಮಾಡು ರಿಪೇರಿಗೆ ಮರದ ಕೆಲಸಗಳು ಶಾಲಾ ಜಗಲಿಯಲ್ಲೇ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರ ಶಬ್ದದಿಂದ ತರಗತಿಯಲ್ಲಿ ಪಾಠ-ಪ್ರವಚನಗಳು ನಡೆಸಲು ಕಷ್ಟಕರವಾಗಿದೆ.
ಸರಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಾತಿಗೊಳಿಸಲು ಪೋಷಕರು ಹಿಂಜರಿಯುತ್ತಿರುವ ಈ ಕಾಲದಲ್ಲಿ ಒಂದೇ ಕೋಣೆಯಲ್ಲಿ ಎರಡು ತರಗತಿಯ ವಿದ್ಯಾರ್ಥಿಗಳನ್ನು ಕೂಡಿ ಹಾಕಿರುವುದಲ್ಲದೆ ಕಟ್ಟಡದ ಗೋಡೆ ಕುಸಿಯುವ ಹಂತಕ್ಕೆ ತಂದೊಡ್ಡಿರುವ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರೋರ್ವರ ಸವರ್ಾಧಿಕಾರಿ ಹಾಗೂ ಏಕಪಕ್ಷೀಯ ನಿರ್ಧಾರದ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಶಾಸಕ ಬಿ ರಮಾನಾಥ ರೈ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಮೌಖಿಕ ದೂರು ನೀಡಿದ್ದಾರೆ. ತಕ್ಷಣ ಕ್ರಮಕ್ಕೆ ಮುಂದಾಗದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.
ಮಳೆ ಬರುವ ಸಮಯದಲ್ಲಿ ಹಂಚು ತೆಗೆದಿರುವುದು ಸರಿಯಲ್ಲ. ಇದಕ್ಕೆ ಸಂಬಂಧಪಟ್ಟ ಮರ, ಇತ್ಯಾದಿಗಳನ್ನು ಮುಂಚಿತವಾಗಿ ಸಿದ್ದಪಡಿಸಿಕೊಂಡು ವಾರದೊಳಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕಾಗಿತ್ತು.
ಶೇಷಶಯನ ಕಾರಿಂಜ
ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ
ಮಾಡು ದುರಸ್ತಿ ಮಾಡುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಮಳೆ ನಿಂತ ಮೇಲೆ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಲಾಗಿದೆ. ತುರ್ತಿಗಾ ಗಿ ದುರಸ್ತಿ ಕಾರ್ಯ ಆರಂಭಿಸಿರುವುದೇ ಈ ಎಲ್ಲಾ ಎಡವಟ್ಟಿಗೆ ಕಾರಣ.
ಪದ್ಮರಾಜ್ ಗೌಡ
ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗ
