ಮೂಡುಬಿದರೆ: ಜುಲೈ 24 -27ರವರೆಗೆ ಹಾಂಕಾಂಗ್ನಲ್ಲಿ ಜರುಗಿದ ಏಷ್ಯಾನ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್ ವಿದ್ಯಾರ್ಥಿ ನಿಯರಾದ ಉಷಾ ಬಿ.ಎನ್. 3 ಬೆಳ್ಳಿ ಪದಕ ಹಾಗೂ ಶಾಲಿನಿ 3 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಸಾಧಕ ಕ್ರೀಡಾಪಟುಗಳನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಇಂಡಿಯನ್ ಪವರ್ ಲಿಫ್ಟಿಂಗ್ ಅಸೋಶಿಯೇಶನ್ನ ಉಪಾಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ, ತರಬೇತುದಾರ ಪ್ರಮೋದ್ ಕುಮಾರ್ ಹಾಗೂ ಆಳ್ವಾಸ್ ಸಂಸ್ಥೆಯ ಕ್ರೀಡಾಪಟುಗಳು ತವರಲ್ಲಿ ಸ್ವಾಗತಿಸಿದರು.
