ಮುಂಬಯಿ, ಜು.22: ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಮತ್ತು ಬಂಟರ ಸಂಘ ಮುಂಬಯಿ ಇವುಗಳ ಆಶ್ರಯದಲ್ಲಿ ಜು.31ರ ಶುಕ್ರವಾರ ಸಂಜೆ 4.00 ಗಂಟೆಯಿಂದ ಕುರ್ಲ  ಪೂರ್ವದಲ್ಲಿನ ಬಂಟರ ಭವನದಲ್ಲಿ ಶ್ರೀ ಗುರು ಪೂರ್ಣಿಮಾ ಉತ್ಸವವನ್ನು ವಿಜೃಂಭನೆಯಿಂದ ನೇರವೇರಿಸಲಾಗುವುದು ಎಂದು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ತಿಳಿಸಿದ್ದಾರೆ.

odiyurಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರು ಇದರ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ಸಂಜೆ 4.00 ಗಂಟೆಯಿಂದ ಶ್ರೀ ವಜ್ರಮಾತಾ ಮಹಿಳಾ ವಿಕಾಸದ ಭಕ್ತೆಯರು ಮತ್ತು ಸೇವಾ ಬಳಗದ ಭಕ್ತರಿಂದ ಭಜನೆ ಸಂಕೀರ್ತನೆ, 6.30 ಗಂಟೆಯಿಂದ ಭಕ್ತರಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮ ಬಳಿಕ ಶ್ರೀಗಳಿಂದ ಆಶೀರ್ವಚನ, 7.30 ಗಂಟೆಗೆ ಮಹಾ ಮಂಗಳಾರತಿ ಬಳಿಕ ಪ್ರಸಾದರೂಪವಾಗಿ ಮನೀಷ್ ಕ್ಯಾಟರರ್ಸ್ನ ಮಾಲಿಕ ವಾಮನ ಎಸ್.ಶೆಟ್ಟಿ ವತಿಯಿಂದ ಅನ್ನಸಂತಾರ್ಪಣೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *