ಯಾವುದರಿಂದ ಆಧ್ಯಾತ್ಮಿಕ ಉನ್ನತಿ ಆಗುತ್ತದೆಯೋ, ಅಂತಹ ಯಾವುದೇ ಶರೀರ, ಇಂದ್ರಿಯ, ಮನಸ್ಸು ಅಥವಾ ಬುದ್ಧಿ ಇವುಗಳ ಕ್ರಿಯೆಗೆ `ಸಾಧನೆ’ ಎಂದು ಹೇಳುತ್ತಾರೆ.
ಸತತ ಸಾಧನೆಯ ವಿಚಾರಗಳನ್ನು ಮಾಡುವುದು: ಪ್ರಿಯಕರನು ಪ್ರೇಯಸಿಯ ಅಥವಾ ಹೊಸದಾಗಿ ಮದುವೆಯಾದ ಪುರುಷನು ತನ್ನ ಹೆಂಡತಿಯ ವಿಚಾರ ಮಾಡುತ್ತಿರುವಂತೆ ಸಾಧಕನು ಸತತ ಸಾಧನೆಯ ವಿಚಾರವನ್ನು ಮಾಡಬೇಕು.
ಸಾಧನೆಯ ತೀವ್ರತೆ (ತಳಮಳ): ಬೆಂಕಿಯಲ್ಲಿ ಸಿಲುಕಿದ ಮನುಷ್ಯನು ಬೆಂಕಿ ಯಿಂದ ಹೊರಬರಲು ಚಡಪಡಿಸುವಷ್ಟೇ ತೀವ್ರತೆಯಿಂದ ಸಾಧನೆಯನ್ನು ಮಾಡ ಬೇಕು. ವೈರಾಗ್ಯ ಪ್ರಾಪ್ತಿಯಾದ ಮನುಷ್ಯನು ಸಂಸಾರರೂಪೀ ಜಂಜಾಟದಿಂದ ಹೊರ ಬರಲು ಚಡಪಡಿಸುತ್ತಾನೆ.

ಸಾಧನೆಯಲ್ಲಿ ಪ್ರಗತಿಯಾಗಲು ಏನು ಮಾಡಬೇಕು?: ಯಾವುದೇ ಸಾಧನೆಯಲ್ಲಿ ಪ್ರಗತಿಯಾಗಲು ಈ ಕೆಳಗಿನ ತತ್ತ್ವಗಳ ಅವಶ್ಯಕತೆಯಿದೆ. ಇಲ್ಲಿ ನಾಮ ಸಾಧನೆಯ ಉದಾಹರಣೆಯನ್ನು ಕೊಡ ಲಾಗಿದೆ. ಗದ್ದೆಯಲ್ಲಿ ಒಳ್ಳೆಯ ಫಸಲು ಬರಲು ಅನೇಕ ಸಂಗತಿಗಳ ಆವಶ್ಯಕತೆ ಯಿರುವಂತೆ ನಾಮಸ್ಮರಣೆಯು ಒಳ್ಳೆಯ ದಾಗಲು ಆವಶ್ಯಕವಿರುವ ಸಂಗತಿಗಳನ್ನು ಮುಂದೆ ಕೊಡಲಾಗಿದೆ.
ಅ.ನಾಮ (ಬೀಜ): ಫಸಲಿನ (ಧಾನ್ಯದ) ಬೀಜವು ಒಳ್ಳೆಯ ತಳಿಯ ದ್ದಾದರೆ ಒಳ್ಳೆಯ ಪೌಷ್ಠಿಕ ಫಸಲು ಬರು ತ್ತದೆ. ನಾಮಸ್ಮರಣೆಯು ಸಾಧನೆಯಲ್ಲಿಯ ಬೀಜವಾಗಿರುತ್ತದೆ. ಗುರುಗಳು ಕೊಟ್ಟ ನಾಮವು ಅಥವಾ ನಿಃಸ್ವಾರ್ಥಿ ಬುದ್ಧಿ ಯಿಂದ ತೆಗೆದುಕೊಂಡ ನಾಮವೇ ಒಳ್ಳೆಯ ನಾಮದ ಬೀಜವಾಗಿದೆ.
ಆ.ಸದ್ಗುಣಗಳು (ಒಳ್ಳೆಯ ಭೂಮಿ): ನಾಮಸ್ಮರಣೆಯು ಮನಸ್ಸಿನಲ್ಲಿ ಆಗುತ್ತಿರಲು ಮನಸ್ಸಿನಲ್ಲಿ ದ್ವೇಷ, ಮತ್ಸರ ಇತ್ಯಾದಿ ದುರ್ಗುಣಗಳು ಇರಬಾರದು. ದಯೆ, ಪ್ರೇಮ ಇತ್ಯಾದಿ ಸದ್ಗುಣಗಳಿರುವ ಮನಸ್ಸು ನಾಮದ ಪ್ರಗತಿಯಾಗಲು ಉಪಯುಕ್ತವಾಗಿರುತ್ತವೆ.
ಇ.ಒಳ್ಳೆಯ ಬುದ್ಧಿ (ರೈತ): ಬೀಜವು ಒಳ್ಳೆಯದಾಗಿ ಅಂಕುರಿಸುತ್ತದೋ ಇಲ್ಲವೋ, ಹಾಗೆಯೇ ಅದರ ಬೆಳವಣಿಗೆ ಯೋಗ್ಯ ಪದ್ಧತಿಯಿಂದ ಆಗುತ್ತದೋ ಇಲ್ಲವೋ ಎನ್ನುವುದರತ್ತ ಸತತವಾಗಿ ರೈತನ ಗಮನವಿರುತ್ತದೆ. ಮನಸ್ಸು ಚಂಚಲ ವಾಗಿರುತ್ತದೆ, ನಾಮವನ್ನು ಬಿಟ್ಟು ಸತತ ವಾಗಿ ಇತರ ಎಲ್ಲದರ ವಿಚಾರಗಳನ್ನು ಮಾಡುವುದು ಮನಸ್ಸಿನ ಸ್ವಭಾವವಾಗಿದೆ. ಬುದ್ಧಿಯಿಂದ ಸದಾ ಮನಸ್ಸಿನ ಮೇಲೆ ಹಿಡಿತವಿಟ್ಟು ಮನಸ್ಸು ಅತ್ತಿತ್ತ ಅಲೆದಾಡಿ ದರೆ ಅದನ್ನು ಪುನಃ ನಾಮದೆಡೆ ತರುವುದು ಬುದ್ಧಿಯ ಕೆಲಸವಾಗಿದೆ.
ಈ.ವಿಧಿನಿಷೇಧಗಳು (ಬೇಲಿ): ಫಸಲು ಹಾಳಾಗಬಾರದೆಂದು, ಎತ್ತು-ಕುರಿ ಗಳು ಒಳಗೆ ಬಂದು ಫಸಲನ್ನು ತಿನ್ನಬಾರ ದೆಂದು; ಗದ್ದೆಗೆ ಒಳ್ಳೆಯ ಬೇಲಿಯನ್ನು ಹಾಕಬೇಕಾಗುತ್ತದೆ. ಕೆಟ್ಟ ವಿಚಾರಗಳು, ಆಚಾರಗಳು, ಉಚ್ಚಾರಗಳು ಆಗಬಾರ ದೆಂದು; ಮನಸ್ಸಿಗೆ ವಿಧಿನಿಷೇಧಗಳ ಬೇಲಿಯನ್ನು ಹಾಕಬೇಕಾಗುತ್ತದೆ.
ಉ.ಭಗವಂತನ ಅಥವಾ ಗುರು ಗಳ ಕೃಪೆಯು (ಸಾಕಷ್ಟು ಮಳೆಯು): ಸಾಧನೆಯಲ್ಲಿ ಪ್ರಗತಿಯಾಗಲು ಮೇಲಿನ 4 ಸಂಗತಿಗಳ ಅವಶ್ಯಕತೆಯಿರುತ್ತದೆ. ನಾವು ಯಾವ ಸಾಧನೆಯನ್ನು ಮಾಡುತ್ತೇವೆಯೋ ಅದನ್ನು ಬೀಜವೆಂದು ತಿಳಿಯಬೇಕು, ಉದಾ. `ತಪಸ್ಸನ್ನು’ ಮಾಡುತ್ತಿದ್ದರೆ ತಪವು ಬೀಜವಾಗಿರುತ್ತದೆ, ಉಳಿದೆಲ್ಲವೂ ಮೇಲೆ ಹೇಳಿದವುಗಳೇ ಆಗಿರುತ್ತವೆ. – ಡಾ.ವಸಂತ ಬಾಳಾಜಿ ಆಠವಲೆ (ಕ್ರಿಸ್ತಶಕ 1991)
