`ಗುರುಗಳಿಗೆ ಅಸಾಧಾರಣ ಮಹತ್ವ ವಿದೆ. ಗುರುಗಳು ಶಿಷ್ಯನಿಗೆ ಅವನ ಮೂಲ ಸ್ವರೂಪದ ಪ್ರಾಪ್ತಿಯನ್ನು ಮಾಡಿ ಕೊಡುತ್ತಾರೆ ಮತ್ತು ಅವನನ್ನು ಜನ್ಮ- ಮೃತ್ಯುವಿನ ಚಕ್ರದಿಂದ ಶಾಶ್ವತವಾಗಿ ಬಿಡುಗಡೆ ಮಾಡುತ್ತಾರೆ. ಆದುದರಿಂದಾಗಿ ಗುರುವಿನ ಋಣವು ಏಂದೂ ತೀರುವು ದಿಲ್ಲ. ಗುರುಗಳ ಕೃಪೆಯಾಗದೇ ಈಶ್ವರ ಪ್ರಾಪ್ತಿ ಅಥವಾ ಮೋಕ್ಷ ಈ ಧ್ಯೇಯವು ಸಾಧ್ಯವಾಗಲಾರದು. ಆದುದರಿಂದ ಗುರುಗಳನ್ನು ಯಾರೊಂದಿಗೂ ತುಲನೆ ಮಾಡಲು ಸಾಧ್ಯವಿಲ್ಲ ಮತ್ತು ಅವರಿಗೆ ಯಾವುದೇ ಉಪಮೆಯನ್ನು ಕೊಡಲೂ ಸಾಧ್ಯವಿಲ್ಲ.

ಈಗಿನ ಕಲಿಯುಗದಲ್ಲಿ ಸಾಧನೆಯನ್ನು ಮಾಡುವುದು, ಅದರಲ್ಲಿಯೂ ಸಾತತ್ಯವನ್ನಿಡುವುದು ಬಹಳ ಕಠಿಣವಿದೆ; ಏಕೆಂದರೆ ಕಾಲ ಎಷ್ಟು ಕಠಿಣವಾಗಿದೆ ಯೆಂದರೆ, ಜೀವನದಲ್ಲಿ ಯಾವುದೇ ಸಮಯದಲ್ಲಿ ಕಠಿಣ ಪ್ರಸಂಗವು ಎದುರಾಗುವ ಸಾಧ್ಯತೆಯಿದೆ. ನಾವು ಕಲಿಯುಗದಲ್ಲಿ ಜನಿಸಿದ್ದರಿಂದ ನಮ್ಮ ಪ್ರತಿಯೊಬ್ಬರ ಪ್ರಾರಬ್ಧವು ತುಂಬಾ ಕಠಿಣವಿದೆ. ಇಂತಹ ಕಷ್ಟಕರ ಪ್ರಾರಬ್ಧದೊಂದಿಗೆ ಗುರುಗಳು ನಮ್ಮನ್ನು ಸ್ವೀಕರಿಸಿದ್ದಾರೆ, ಇಷ್ಟೇ ಅಲ್ಲದೆ, ಅವರು ನಮ್ಮ ದೋಷ, ಮತ್ತು ಅಹಂ, ಸಾಧನೆ ಯಲ್ಲಿರುವ ಅಲ್ಪ ತಳಮಳ ಮತ್ತು ಪ್ರಯತ್ನ ಇವುಗಳೆಲ್ಲರೊಟ್ಟಿಗೆ ನಮ್ಮನ್ನು ಸ್ವೀಕರಿಸಿರು ತ್ತಾರೆ ಮತ್ತು ನಮಗಾಗಿ ಅನೇಕ ಕಷ್ಟಗಳನ್ನು ಸಹಿಸಿ ಸಾಧನೆಯಲ್ಲಿ ನಮ್ಮ ಪ್ರಗತಿ ಯಾಗಲು ಎಲ್ಲ ರೀತಿಯಿಂದ ಕಷ್ಟಪಡುತ್ತಿದ್ದಾರೆ.
ಗುರುಗಳು ಮೋಕ್ಷದ ಸ್ಥಾನದಲ್ಲಿಯೇ ಇರುತ್ತಾರೆ, ಆದರೂ ಅದು ನಮಗೆ ಸಿಗಬೇಕೆಂದು; ಅವರದ್ದು ಎಷ್ಟು ತಳಮಳವಿರುತ್ತದೆ. ಇದರಲ್ಲಿ ಅವರಿಗೇನೂ ಲಾಭವಿರುವುದಿಲ್ಲ. ಕೇವಲ ನಮಗೆ ಅದರ ಲಾಭವಾಗಬೇಕೆಂದು ಅವರು ಇಷ್ಟೆಲ್ಲ ಪ್ರಯತ್ನಿಸುತ್ತಿರುತ್ತಾರೆ.’
(ಕೃಪೆ ಸನಾತನ ಸಂಸ್ಥೆ)
