ಲಂಡನ್: ಕೋಳಿ ಸೇರಿ ಅನೇಕ ಪಕ್ಷಿಗಳಿಗೂ ಸ್ಫೋಟಕ ವಸ್ತುಗಳನ್ನು ಕಟ್ಟಿ, ಶತ್ರುಗಳ ಮೇಲೆ ಈ ಉಗ್ರರು ಆತ್ಮಾಹುತಿ ದಾಳಿ ನಡೆಸುತ್ತಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
unnamed
ಐಸಿಸ್ ಭಯೋತ್ಪಾಕರು ಕೋಳಿಯೊಂದರ ಬೆನ್ನಿಗೆ ಸ್ಫೋಟಕಗಳನ್ನು ಕಟ್ಟಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಮಿರರ್ ಆನ್‌ಲೈನ್ ವರದಿ ಮಾಡಿದೆ.

ಪಕ್ಷಿಗಳನ್ನು ಶತ್ರುಗಳಿಗೆ ಸೇರಿದ ಪ್ರದೇಶದಲ್ಲಿ ಓಡಾಡಲು ಉಗ್ರರು ಬಿಡುತ್ತಾರೆ. ರಿಮೋಟ್ ಕಂಟ್ರೋಲ್ ಸಹಾಯದಿಂದ ನಂತರ ಪಕ್ಷಿ ಬೆನ್ನಿಗೆ ಕಟ್ಟಿದ ಸ್ಫೋಟಕ ಸಾಧನಗಳನ್ನು ಸ್ಫೋಟಿಸಲಾಗುತ್ತದೆ ಎಂದು ವರದಿ ಹೇಳಿದೆ. ಮಾನವ ಸಂಪನ್ಮೂಲದ ಕೊರತೆಯಿಂದ ಉಗ್ರರು ಪಕ್ಷಿಗಳನ್ನು ಬಳಸಲು ಮುಂದಾಗಿದ್ದಾರೆ ಎಂಬುವುದು ತಜ್ಞರ ಅಭಿಪ್ರಾಯ.

ಸ್ಫೋಟಕಗಳನ್ನು ಪೂರೈಸುತ್ತಿದ್ದ ಸಿರಿಯಾ ಮತ್ತು ಇರಾಕ್‌ಗೆ ತೆರಳುವ ಮಾರ್ಗಗಳು ಬಂದ್ ‌ಆಗಿರುವುದರಿಂದ ಐಸಿಸ್ ಉಗ್ರರು ರಾಸಾಯನಿಕ ಗೊಬ್ಬರ, ಗ್ಯಾಸ್ ಗುಂಡುಗಳು ಮತ್ತು ಸಣ್ಣ ಫಿರಂಗಿಗಳನ್ನು ಬಳಸಿಕೊಂಡು ಸ್ವತಃ ಬಾಂಬ್ ತಯಾರಿಸಲು ಮುಂದಾಗುತ್ತಿದ್ದಾರೆ, ಎಂದು ಬ್ರಿಟಿಷ್ ದೈನಿಕ ಡೈಲಿ ಸ್ಟಾರ್ ವರದಿ ಮಾಡಿದೆ.

By Suddi9

Leave a Reply

Your email address will not be published. Required fields are marked *