ವಾಷಿಂಗ್ಟನ್: ಮಂಗಳ ಗ್ರಹದ ಸುತ್ತ ಸುತ್ತುತ್ತಿರುವ ನಾಸಾದ ಕ್ಯೂರಿಯಾಸಿಟಿ ಕೃತಕ ಉಪಗ್ರಹ, ಮಂಗಳ ಗ್ರಹದ ಕಲ್ಲಿನ ಮೇಲೆ ನಿಂತಿರುವ ಉದ್ದ ಕೂದಲಿನ ಹೆಣ್ಣಿನ ಚಿತ್ರವನ್ನು ಕಳುಹಿಸಿದೆ. ಇದು ಹೆಣ್ಣಿನ ಭೂತದಂತೆ ಕಂಡುಬರುತ್ತಿದೆ ಎಂದು ವಿಜ್ಞಾನ ಬರಹಗಾರ ಜೆಫ್ರಿ ಕೂಗ್ಲರ್ ವಿಶ್ಲೇಷಿಸಿದ್ದಾರೆ.

ಮೊದಲು ಬೃಹತ್ ಗಾತ್ರದ ಏಡಿ ಎಂದು ಭಾವಿಸಲಾಗಿತ್ತು, ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಹುಡುಗಿಯೊಬ್ಬಳು ಕಲ್ಲಿನ ಮೇಲೆ ನಿಂತಿರುವಂತೆ ಗೋಚರವಾಗಿದೆ. ಇದರಿಂದ ಮಂಗಳ ಗ್ರಹದಲ್ಲಿ ಜೀವ ಸಂಕುಲ ಇರಬಹದೆನ್ನುವ ತರ್ಕ ಆರಂಭವಾಗಿದೆ.
