ಬಂಟ್ವಾಳ : ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಬಂಟ್ವಾಳ ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನೆರೆಹೊರೆ-ಯುವ ಸಂಸತ್ತು ಇದರ ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ಅನುಷ್ಠಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರಗಳ ಕುರಿತು ತರಬೇತಿ ಕಾರ್ಯಕ್ರಮ ನೇರಂಬೋಳು ಶ್ರೀ ರಕ್ತೇಶ್ವರ ಸಭಾಭವನದಲ್ಲಿ ಜು.19 ರಂದು ಜರಗಿತು.
111
ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಪಂ.ಅ.ಅಧಿಕಾರಿ ನಾಗೇಶ್ ಎಂ., ಅಗ್ರಾರ್ ಶಾಖಾ ಕಛೇರಿ ಅಂಚೆಪಾಲಕ ಗಣೇಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಪ್ರಧಾನ ಮಂತ್ರಿ ಜನಧನ ಯೋಜನೆ, ಸುಕನ್ಯ ಸಮೃದ್ಧಿ ಯೋಜನೆ, ಸ್ವಚ್ಛ ಭಾರತ ಆಂದೋಲನ, ಆದರ್ಶ ಗ್ರಾಮ ಯೋಜನೆ, ನಿರ್ಮಲ ಭಾರತ ಆಂದೋಲನ ಇದರ ಬಗ್ಗೆ ಮಾಹಿತಿ ನೀಡಿದರು.
ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ, ಕನರ್ಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ. ಎಂ. ಕುಲಾಲ್, ಸಂಘದ ಅಧ್ಯಕ್ಷ ಮನೋಹರ್ ನೇರಂಬೋಳು, ಗೌರವಾಧ್ಯಕ್ಷ ಚಂದ್ರಹಾಸ ಟೈಲರ್ ಉಪಸ್ಥಿತರಿದ್ದರು.
ನವೀನ್ ಸಿ. ಅವರು ಸ್ವಾಗತಿಸಿದರು. ಹರ್ಷಿತ್ ಪೂಜಾರಿ ವಂದಿಸಿದರು, ರವೀಂದ್ರ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.
ಫೊಟೋ ಇದೆ.

By suddi9

Leave a Reply

Your email address will not be published. Required fields are marked *