ಮಂಜನಾಡಿ ಮಂಗಳಾಚಿತಿಯ ಮಹ್ ದನುಲ್ ಉಲೂಂ ಮದರಸ
ಉಳ್ಳಾಲ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಫ್ ಇಂಡಿಯಾ ಅಂಗೀಕೃತ ಮದ್ರಸಗಳಲ್ಲಿ ಕಳೆದ ಜೂನ್ ತಿಂಗಳಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಮಂಜನಾಡಿಯ ಮಹ್‍ದನುಲ್ ಉಲೂಂ ಮದರಸಕ್ಕೆ 100 ಶೇ ಪಲಿತಾಂಶ ದಾಖಲಿಸಿದೆ.
5ನೇ ತರಗತಿಯ ಮತ್ತು 7ನೇ ತರಗತಿ ಮತ್ತು 10ನೇಯ ತರಗತಿಗಳಲ್ಲಿ ನೂರು ಶೇಕಡ ಪಲಿತಾಂಶ ಬಂದಿದ್ದು, 5ನೇ ತರಗತಿಯಲ್ಲಿ ಅಬೂಬಕ್ಕರ್ ಅನಸ್ ಮತ್ತು ಹಯಾಝ್ ಎಮ್.ಎಚ್ ಈ ಎರಡು ವಿದ್ಯಾರ್ಥಿಗಳು ಕರ್ನಾಟಕದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.
ಇದೇ ಮದ್ರಸದ 10ನೇ ತರಗತಿಯ ವಿದ್ಯಾರ್ಥಿನಿ ಸಂಶೀನ ಮಂಜನಾಡಿ ರೇಂಜ್ ಮಟ್ಟದಲ್ಲಿ ಪ್ರಥಮ ಎಂದು ಮಹ್‍ದನುಲ್ ಉಲೂಂ ಮದರಸ ಮುಹಲ್ಲಿಂ ಹೈದರ್ ಮುಸ್ಲಿಯಾರ್ ಕಲ್ಕಟ್ಟ ತಿಳಿಸಿದ್ದಾರೆ.
