ಉಳ್ಳಾಲ: ಉಳ್ಳಾಲದಲ್ಲಿ ರಂಜಾನ್ ಉಪವಾಸ ಮತ್ತು ಈದ್ ಹಬ್ಬವು ಸಂಭ್ರಮ ಶಾಂತಿ ಸುವ್ಯವಸ್ಥೆಯಿಂದ ನಡೆದಿದೆ. ಹಬ್ಬದ ಪ್ರಯುಕ್ತ ಯಾವುದೇ ಅಹಿತಕರ ಘಟನೆಗಳು ನಡೆಯದೇ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿರುವುದು ಸ್ವಾಗತಾರ್ಹ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಉಳ್ಳಾಲದಲ್ಲಿ ಶನಿವಾರ ನಡೆದ ಈದ್ ನಮಾಜ್ ಮುಗಿದ ಬಳಿಕ ಮಾತನಾಡಿದರು. ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಮಾತನಾಡಿ ರಂಜಾನ್ ಉಪವಾಸ ಮತ್ತು ಈದ್ ಬಹಳಷ್ಟು ಶಾಂತಿ ಸೌಹಾರ್ದತೆಯಿಂದ ಉಳ್ಳಾಲದಲ್ಲಿ ನಡೆದಿದೆ. ಒಂದು ತಿಂಗಳ ಉಪವಾಸದ ಅಮಯದಲ್ಲಿ ಶಾಂತಿ ಹದಗೆಡದಂತೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ ಎಲ್ಲಾ ಇಲಾಖೆಗಳು ಮತ್ತು ತುಂಬು ಹೃದಯದಿಂದ ಸಹಕರಿಸಿದವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

DSC_1668

DSC_1681

DSC_1751

DSC_6228

DSC_6230

DSC_6233

DSC_6241

DSC_6257

DSC_6258

DSC_6271

DSC_6277

DSC_6284

DSC_6287

DSC_6300

DSC_6302

DSC_6308

DSC_6325

DSC_6331

DSC_6335

DSC_6339

ಈ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು ಎಸ್. ಹಂಝ, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‍ವೇ, ಪ್ರ. ಕಾರ್ಯದರ್ಶಿ ಯು.ಟಿ. ಇಲ್ಯಾಸ್ ತೋಟ, ಜತೆ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಅಶ್ರಫ್, ಫಾರೂಕ್ ಮಾರ್ಗತಲೆ, ಕೋಶಾಧಿಕಾರಿ ಹಾಜಿ ಮೊಹಮ್ಮದ್ ಬಿಲಾಲ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ, ಜತೆ ಕಾರ್ಯದರ್ಶಿ ಫಾರೂಕ್ ಕೋಡಿ, ಅರೆಬಿಕ್ ಟ್ರಸ್ಟ್ ಪ್ರ. ಕಾರ್ಯದರ್ಶಿ ಸಯ್ಯದ್ ಝಿಯಾ ತಂಙಳ್,ಕೋಶಾಧಿಕಾರಿ ತಂಝೀಲ್ ಮುಕಚೇರಿ, ಮತ್ತು ದರ್ಗಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.  ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಅಧೀನದ ದೇರಳಕಟ್ಟೆಯ ಉಮರ್ ಬಿನ್ ಖತಾಬ್‍ಸಲಫಿ ಮಸೀದಿಯಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಈದ್ ನಮಾಜಿನಲ್ಲಿ ಪಾಲ್ಗೊಂಡರು . ಈ ಸಂದರ್ಭ ಸಲಫಿ ಮೂವ್ ಮೆಂಟಿನ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಹಬ್ಬದ ಶುಭಾಷಯ ಕೋರಿದರು.

By suddi9

Leave a Reply

Your email address will not be published. Required fields are marked *