ಫರಂಗಿ ಪೇಟೆ :ಪುದು ಗ್ರಾಮ ಪಂಚಾಯತ್ ಬಳಿ ನಡೆದ ಭೂ ಕುಸಿತ ದಲ್ಲಿ ಮೂವರು ಸಾವಿಗೀಡಾದ ಸ್ಥಳಕ್ಕೆ ಸಂಸತ್ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಆಗಮಿಸಿ ಪರಿಶೀಲಿಸಿದರು , ಭೂ ಕುಸಿತ ದಿಂದ ಹಾನಿಗೀಡಾದ ಮನೆಗಳ ನಿವಾಸಿ ಗಳನ್ನು ಅಲ್ಲಿಂದ ತೆರವು ಗೊಳಿಸಿ ಪರ್ಯಾಯ ವ್ಯವಸ್ತೆ ಮಾಡುವಂತೆ ಪಂಚಾಯತ್ ಅದ್ಯಕ್ಷರಿಗೆ , ಪಿ ಡಿ ಓ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾದ್ಯಕ್ಷ ರಾದ ಶ್ರೀ ಸತೀಶ್ ಕುಂಪಲ , ಮಂಗಳೂರು ಮಂಡಲ ಬಿ ಜೆ ಪಿ ಅದ್ಯಕ್ಷರಾದ ಚಂದ್ರಶೇಖರ ಉಚ್ಚಿಲ , ಯಶವಂತ ಅಮಿನ್ , ಚರಣ್ , ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ ಎ , ತಾಲೂಕ ಪಂಚಾಯತ್ ಸದಸ್ಯ ಇಕ಼್ಬಾಲ್ , ಎ ಕೆ ಗಿರೀಶ್ ಶೆಟ್ಟಿ , ಸುಬ್ರಮಣ್ಯ ರಾವ್, ಸ್ಥಳೀಯ ಬಿ ಜೆ ಪಿ ಮುಖಂಡರು ಉಪಸ್ಥಿತರಿದ್ದರು
