• ಉಳ್ಳಾಲ: ಆತ ಕ್ಲಾಸಿನಲ್ಲಿ 3 ನೇ ರ್ಯಾಂಕ್ ಗಳಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ . ಎಲ್ಲಾ ಚಟುವಟಿಕೆಗಳಲ್ಲೂ ಮುಂದಿದ್ದ. ಆದರೆ ದುರಂತವೆಂದರೆ ಒಂದು ಸೈಕಲ್ ಅಪಘಾತ ಆತನನ್ನು ಮೂರು ವರ್ಷಗಳಿಂದ ಜೀವಚ್ಛವವಾಗಿ ಮಲಗಿಸಿದೆ. ಆರ್ಥಿಕವಾಗಿ ಬಳಲಿರುವ ಕುಟುಂಬಕ್ಕೆ ಸಹಾಯ ಹಸ್ತ ಬೇಕಾಗಿದೆ.
  • ಕುತ್ತಾರು ಸುಭಾಷ್ನಗರ ನಿವಾಸಿ ಜಯಂತಿ ಅವರಿಗೆ ಆಘಾತಗಳ ಮೇಲೊಂದು ಆಘಾತ. ಹತ್ತು ವರ್ಷಗಳ ಹಿಂದೆ ಮನೆಗೆ ಆಧಾರ ಸ್ತಂಭವಾಗಿದ್ದ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡರು. ಅದರ ದು:ಖ ಹಾಗೂ ಜೀವನ ನಿರ್ವಹಣೆಯನ್ನು ಸರಿದೂಗಿಸುವ ಸಂದರ್ಭದಲ್ಲಿ ಮಗ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ 15ರ ಹರೆಯದ ಪುನೀತ್ ಸೈಕಲ್ ಅಪಘಾತಕ್ಕೀಡಾಗಿ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾನೆ.
  • 13ullal1
    13ullal2
    ಪುನೀತ್ ಸಂತ ಆಲೋಷಿಯಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. 2011ರ ಡಿಸೆಂಬರ್ನಲ್ಲಿ ಮನೆಯ ಪಕ್ಕದ ರಸ್ತೆಯಲ್ಲಿ ಇತರ ಸ್ನೇಹಿತರೊಂದಿಗೆ ಸೈಕಲ್ನಲ್ಲಿ ತೆರಳುತ್ತಿದ್ದಾಗ ಇಳಿಜಾರಿನ ಪ್ರದೇಶದಲ್ಲಿ ಅಪಘಾತವಾಗಿದ್ದು, ಕುತ್ತಿಗೆಯ ಹಿಂಬಾಗಕ್ಕೆ ಕಲ್ಲು ಬಡಿದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೆಚ್ಚೇನು ಸ್ಪಂದಿಸದ ಪುನೀತ್ನನ್ನು ಮನೆಗೆ ಕರೆ ತಂದಿರುವ ತಾಯಿ ಜಯಂತಿ ಕಳೆದ ಮೂರು ವರ್ಷಗಳಿಂದ ಮಗನ ಆರೈಕೆಯಲ್ಲಿ ತೊಡಗಿದ್ದಾರೆ.
    ಹೊಟ್ಟೆಗೆ ಪೈಪ್ ಮೂಲಕ ಆಹಾರ : ಪುನೀತ್ಗೆ ಕಳೆದ ಮೂರುವರೆ ವರ್ಷದಿಂದ ಪೈಪ್ ಮೂಲಕ ಆಹಾರ ನೀಡಲಾಗುತ್ತಿದೆ. ಪುನಿತ್ಗೆ ಈಗ 19 ವರ್ಷವಾಗಿದ್ದು, ಮಲಗಿದ್ದಲ್ಲೇ ಆಹಾರ ಮತ್ತು ನಿತ್ಯ ಕರ್ಮಗಳನ್ನು ಪೂರೈಸುತ್ತಿದ್ದು, ಎಲ್ಲದಕ್ಕೂ ತಾಯಿಯೇ ಮಾಡಬೇಕಾಗಿದೆ. ಮೂಲತ: ಉಜಿರೆಯವರಾದ ಜಯಂತಿ ಅವರ ಪತಿ ಪೆರ್ಲದ ಶೇಣಿಯವರು, ಕಳೆದ 15 ವರ್ಷಗಳಿಂದ ಸುಭಾಷ್ನಗರದಲ್ಲಿ ವಾಸಿಸುತ್ತಿದ್ದು, 13 ವರ್ಷದ ಹಿಂದೆ ಈಕೆಯ ಪತಿ ರಮೇಶ್ ನಿಧನ ಹೊಂದಿದರು. ಪತಿಯ ನಿಧನದ ಬಳಿಕ ಪತಿಯ ಸಹೋದರನ ಕುಟುಂಬದೊಂದಿಗೆ ವಾಸವಾಗಿರುವ ಜಯಂತಿಗೆ ಆಸರೆಯಾಗಿದ್ದರು ಮಂಗಳೂರಿನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರಿಯ ಶಿಕ್ಷಣ ವೆಚ್ಚ, ಮಗನ ಆರೈಕೆಗೆ ಖರ್ಚಾಗುತ್ತಿದ್ದು, ಇದರೊಂದಿಗೆ ಜೀವನ ನಿರ್ವಹಣೆಗೆ ಬೀಡಿಯನ್ನು ನೆಚ್ಚಿಕೊಂಡಿದ್ದಾರೆ.
    ಪ್ರತಿಭಾನ್ವಿತ ವಿದ್ಯಾರ್ಥಿ  : ಪುನೀತ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಕಲಿಕೆಯಲ್ಲಿ ಮುಂದಿದ್ದ, ಮಗನಿಗೆ ಅಪಘಾತ ನಡೆದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯವರು ಸಹಾಯ ಮಾಡಿರುವುದನ್ನು ಜಯಂತಿ ಸ್ಮರಿಸುತ್ತಾರೆ. ಆಯುರ್ವೇದಿಕ್ ಔಷದಿಯನ್ನು ನೆಚ್ಚಿಕೊಂಡಿದ್ದು, ಮಗ ಗುಣಮುಖನಾಗುತ್ತಾನೆ ಎನ್ನುವ ಭರವಸೆಯಲ್ಲಿದ್ದಾರೆ.
    ಪುನಿತ್ ಚಕಿತ್ಸೆಗೆ ಸಹಕರಿಸುವವರು: ಜಯಂತಿ ಖಾತೆ ಸಂಖ್ಯೆ : 02192200050828, 0000219 ಸಿಂಡಿಕೇಟ್ ಬ್ಯಾಂಕ್ ದೇರಳಕಟ್ಟೆ ಶಾಖೆ ದೂರವಾಣಿ : 7353434699 ಇವರನ್ನು ಸಂಪರ್ಕಿ ಸಬಹುದು.

By suddi9

Leave a Reply

Your email address will not be published. Required fields are marked *