ಉಳ್ಳಾಲ: ಇಫ್ತಾರ್ ಕೂಟವು ಮುಸ್ಲಿಂ ಸಮುದಾಯದ ರಂಜಾನ್ ತಿಂಗಳಲ್ಲಿ ನಡೆಯುವ ಒಂದು ಕಾರ್ಯಕ್ರಮ. ಬೆಳಗ್ಗಿನಿಂದ ಉಪವಾಸ ವ್ರತ ಆಚರಿಸಿದವರಿಗೆ ಇಫ್ತಾರ್ ಕಾರ್ಯಕ್ರಮ ಏರ್ಪಡಿಸುವುದು ಸಾಧಾರಣ ಎಲ್ಲಾ ಕಡೆ ಇದೆ. ಬಹಳಷ್ಟು ಪುಣ್ಯದಾಯಕವಾದ ಈ ಕಾರ್ಯಕ್ರಮ ನಿರಂತರ ಉಳ್ಳಾಲದಲ್ಲೂ ಕೂಡಾ ನಡೆಯುತ್ತಿದೆ.
ಬಹಳಷ್ಟು ಮಂದಿ ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಹೇಳಿದರು.
ಅವರು ಉಳ್ಳಾಲ ದರ್ಗಾದಲ್ಲಿ ಸೋಮವಾರ ನಡೆದ ಇಫ್ತಾರ್ ಕೂಟ ಸಮಾರಂಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಉಳ್ಳಾಲ ದರ್ಗಾ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಕೋಶಾಧಿಕಾರಿ ಬಿಲಾಲ್ ಮಹಮ್ಮದ್ ಹಾಜಿ, ಲೆಕ್ಕರಿಶೋಧಕ ಅಬ್ದುಲ್ ಹಮೀದ್ ಕಲ್ಲಾಪು, ದಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ, ಜಮಾಅತ್ ಸದಸ್ಯರು, ದರ್ಗಾ ಸಮಿತಿ ಸದಸ್ಯರು ಭಾಗವಹಿಸಿದ್ದರು