ಕೈಕಂಬ: ಕಂದಾವರ ಗ್ರಾಮ ಪಂಚಾಯತ್ಗೆ ಅಧ್ಯಕ್ಷರಾಗಿ ಸತತ ಎರಡನೆ ಭಾರಿ ಆಯ್ಕೆಯಾದ ವಿಜಯ ಗೋಪಾಲ ಸುವರ್ಣ ಮತ್ತು ಉಪಾಧ್ಯಕ್ಷರಾಗಿ ದೇವೆಂದ್ರ ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಂದ ಹಾಗೂ ಪಕ್ಷದ ಪ್ರಮುಕರಿಂದ ಅಭಿನಂದಿಸಲಾಯಿತು. ಗ್ರಾಮ ಪಂಚಾಯತ್ ನ 27ಸದಸ್ಯರ ಪೈಕಿ 25ಸದಸ್ಯರು ಹಾಜರಿದ್ದು ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಜಾನ್ಸನ್ ಲೋಬೊ, ಎಡ್ವಕೇಟ್ ವಿನೋಧರ ಪೂಜಾರಿ ಉಪಸ್ಥಿತರಿದ್ದರು.


