ಮುಂಬಯಿ: ಜು.28ರಂದು ಶ್ರೀಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕಕ್ಕೆ ಭೇಟಿ ಶ್ರೀಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕಕ್ಕೆ ಒಡಿಯೂರುಶ್ರೀ ಭೇಟಿ ನೀಡುವ ಬಗ್ಗೆ ವಿಶೇಷ ಸಭೆಯು ಮುಂಬಯಿ ಸೈನ್ನಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ವಹಿಸಿದ್ದರು.

ಜು.10 ರಂದು ಶುಕ್ರವಾರ ಸಂಜೆ ಸೈನ್ ನಿತ್ಯಾನಂದ ಸಭಾಗೃಹದಲ್ಲಿ ನಡೆದ ಸಭೆಯಲ್ಲಿ ಶ್ರೀಗಳ ವಾರ್ಷಿಕ ಭೇಟಿ ಬಗ್ಗೆ ಹಾಗೂ ಸಾಧ್ವಿ ಶ್ರೀಮಾತಾನಂದಮಯಿ ಅವರ ಈ ಬಾರಿಯ ಮುಂಬಯಿ ಕಾರ್ಯಕ್ರಮಗಳ ವಿವರವನ್ನು ಮುಂದಿರಿಸಿಕೊಂಡು ಪ್ರದಾನವಾಗಿ ಚರ್ಚಿಸಲಾಯಿತು. ಗುರುದೇವ ಬಳಗವು 16ನೇ ವರ್ಷದ ಸಂಭ್ರಮಾಚರಣೆ ಹಾಗೂ ಒಡಿಯೂರು ಕ್ಷೇತ್ರದ 25 ವರ್ಷಗಳ ರಜತ ಮಹೋತ್ಷವದ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಕಾರ್ಯಕ್ರಮಗಳ ವಿವರವನ್ನು ಸಭೆಯಲ್ಲಿ ನೀಡಲಾಯಿತು.
ಈ ಸಂದಭ್ದಲ್ಲಿಹಿರಿಯ ಮುತ್ಸದ್ಧಿಗಳು ಹಾಗೂ ಶ್ರೀಕ್ಷೇತ್ರ ಒಡಿಯೂರುನ ಪರಮ ಭಕ್ತರಾದ ಎ ಟು ಝೆಡ್ ನಾರಾಯಣ ಆರ್. ಶೆಟ್ಟಿಮತ್ತು ವಾಮಯ್ಯ ಶೆಟ್ಟಿ ಅವರನ್ನೊಳಗೊಂಡು ಮೇರ್ಕಳ ತ್ಯಾಂಪಣ್ಣ ಶೆಟ್ಟಿ ಅವರು ಒಡಿಯೂರುಶ್ರೀಗಳ 2015ನೇ ಸಾಲಿನ ವಾರ್ಷಿ ಕ ಮುಂಬಯಿ ಭೇಟಿಯ ಆಮಂತ್ರಣವನ್ನು ಬಿಡುಗಡೆ ಗೊಳಿಸಿದರು.
ಬಳಿಕ ಮಹಾರಾಷ್ಟ್ರ ರಾಜ್ಯದಿಂದ ರಾಷ್ಟ್ರೀಯ ತನಿಖಾ ಕರ್ತೃತ್ವ ಸಂಸ್ಥೆಗೆ (ಎನ್ಐಎ) ನೇಮಿಸಲ್ಪಟ್ಟ ಬಳಗದ ಅಧ್ಯಕ್ಷರೂ, ಪ್ರತಿಷ್ಠಿತ ವಕೀಲರೂ ಆದ ನ್ಯಾಯವಾದಿ ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ ಅವರನ್ನು ಬಳಗದ ವತಿಯಿಂದ ಪುಷ್ಫಗುಪ್ಚವನ್ನಿತ್ತು ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಹಿತರಕ್ಷಣಾ ವಿಚಾರಕ್ಕೆ ಕೇಂದ್ರ ಸರಕಾರವು ನನ್ನನ್ನು ಸೂಕ್ತ ಕಾನೂನುತಜ್ಞನನ್ನಾಗಿ ಗುರುತಿಸುವಿಕೆಗೆ ಜನ್ಮಭೂಮಿ ಮತ್ತು ಕರ್ಮಭೂಮಿಯ ಸರ್ವ ಜನಾಂಗೀಯ ಜನತೆಯ ಪ್ರೀತಿ ಮತ್ತು ಆಶೀರ್ವಾದವೇ ಕಾರಣ. ಜನತೆ ನನ್ನಮೇಲಿರಿಸಿದ ಅಪಾರ ವಿಶ್ವಾಸಕ್ಕೆ ದಕ್ಕೆಯಾಗದಂತೆ ರಾಷ್ಟ್ರದ ಹಿತರಕ್ಷಣೆಗಾಗಿ ಕಾನೂನಾತ್ಮಕವಾಗಿ ಶ್ರಮಿಸುವೆ.
ದೇಶದ ಏಕತೆಗೆ ಧಕ್ಕೆ ಬರುವ ಯಾವುದೇ ವಿಚಾರ-ವಿಷಯದಲ್ಲಿ ಎಂದಿಗೂ ಸಂಧಾನ ಮಾಡದೆ ಸವಿಂಧಾನಾತ್ಮಕ ನಿಯಮಾನುಸಾರ ನಿಷ್ಠನಾಗಿ ದುಡಿಯುವೆ. ನನ್ನ ಮುಂದಿನ ಸೇವೆಗೆ ಗುರುವರ್ಯರ ಅನುಗ್ರಹ ಮತ್ತು ತಮ್ಮೆಲ್ಲರ ಆಶೀರ್ವಾದ ಅತ್ಯವಶ್ಯವಾಗಿದ್ದು ಹಿಂದೂಸ್ಥಾನದ ಸರ್ವೋನ್ನತಿಗೆ ನಾನು ಸದಾ ಬದ್ಧನಾಗಿ ಶ್ರಮಿಸುವೆ ಎಂದು ನುಡಿದರು.
ಬಳಗದ ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ಗೌರವ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಗೌರವ
ಕೋಶಾಧಿಕಾರಿ ಬೋಜ ಶೆಟ್ಟಿ, ಜೊತೆ ಕಾರ್ಯದರ್ಶಿ ದಾಮೋದರ ಶೆಟ್ಟಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿವೇದಿಕೆಯಲ್ಲಿ ಆಸೀನರಾಗಿದ್ದರು.ಹಿರಿಯ ರಾದ ಶ್ರೀಕ್ಷೇತ್ರ ಒಡಿಯೂರಿನ ಪರಮ ಭಕ್ತರಾದ ಎ ಟು ಝೆಡ್ ನಾರಾಯಣ ಆರ್.ಶೆಟ್ಟಿಮತ್ತು ವಾಮಯ್ಯ ಶೆಟ್ಟಿ ,ಮೇರ್ಕಳ ತ್ಯಾಂಪಣ್ಣ ಶೆಟ್ಟಿ ,ಶ್ಯಾಮ ಎನ್.ಶೆಟ್ಟಿ, ಕೃಷ್ಣ ಶೆಟ್ಟಿ, ರಮೇಶ್ ಶೆಟ್ಟಿ, ಸುವಾಸಿನಿ ಎಸ್.ಶೆಟ್ಟಿ, ಕುಶಲ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ದಾಮೋದರಶೆಟ್ಟಿ ನೆರೂಲ್, ಗುಣಪಾಲ ಶೆಟ್ಟಿ ಥಾಣೆ, ಆನಂದ್ ಐಲ್, ಪಿ.ಡಿ ಶೆಟ್ಟಿ ಸಯನ್ ಮಾಹೂ ಸೇವಾ ಬಳಗದ ಸದಸ್ಯರು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ವಜ್ರಮಾತಾ ಮಹಿಳಾ ಭಕ್ತೆಯರ ಪ್ರಾರ್ಥನೆಯೊಂದಿಗೆ ಸಭೆ ಮುಕ್ತಾಯಗೊಂಡಿತು. ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಗತ ಸಭೆಯ ವಾರ್ಷಿಕಕ ವರದಿ ವಾಚಿಸಿ ಸಭಾ ಕಲಾಪನಡೆಸಿದರು. ದಾಮೋದರ ಶೆಟ್ಟಿ ಧನ್ಯವಾದವಿತ್ತರು.
ಚಿತ್ರ ವರದಿ: ರೋನ್ಸ್ ಬಂಟ್ವಾಳ್






