ಕಿನ್ನಿಗೋಳಿ: ಎರಡು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಮುಲ್ಕಿ ಸುತ್ತ ಮುತ್ತ ಶಾಂಭವಿ ಮತ್ತು ನಂದಿನಿ ನದಿಗಳು ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವ್ರತವಾಗಿದೆ, ಕಳೆದ ಹಲವು ದಿನಗಳಿಂದ ಮಳೆಯ ಪ್ರಮಾಣ ಕಡಿಮೆ ಇದ್ದು, ಕ್ರಷಿ ಚಟುವಟಿಕೆಗಳು ನಿಧಾನವಾಗಿತ್ತು ಆದರೆ ಎರಡು ದಿನಗಳಿಂದ ಸುರಿಯುತಿರುವ ಮಳೆಯಿಂದಾಗಿ ಕ್ರಷಿ ಪ್ರದೇಶಗಳು ಮುಳುಗಡೆಯಾಗಿದೆ.
ಮುಲ್ಕಿ ಸಮೀಪ ಮಟ್ಟು, ಕುಬೇವೂರು, ಹಳೆಯಂಗಡಿಯ ಪಾವಂಜೆ, ಪಡುಪಣಂಬೂರು, ಕಿನ್ನಿಗೋಳಿಯ ಕಿಲೆಂಜೂರು ಉಲ್ಲಂಜೆ, ಕಟೀಲು ಪ್ರದೇಶದ ಜಲಕದ ಕಟ್ಟೆ ಭೂತಗುಂಡಿ ಮುಂತಾದ ಪ್ರದೇಶಗಳಲ್ಲಿ ಜಲಾವ್ರತವಾಗಿದೆ, ಇದೇ ರೀತಿ ಮಳೆ ಮುಂದುವರಿದಲ್ಲಿ ನಾಟಿ ಮಾಡಿದ ಭತ್ತ ಬೆಳೆ ನಾಶವಾಗುವ ಸಾದ್ಯತೆ ಇದೆ.

