ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಅಂಗಡಿಪಲ್ಕೆ ಎಂಬಲ್ಲಿ ಅಪ್ರಾಪ್ತ ಯುವತಿಯನ್ನು ಮಡಿಕೇರಿ ಮೂಲಕ ಯುವಕನೊಬ್ಬ ಅಪಹರಿಸಿದ್ದಾನೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಯುವತಿ ಪೋಷಕರು ದೂರು ಸಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.
ಆರೋಪಿಯನ್ನು ಮಡಿಕೇರಿ ನಿವಾಸಿ ಮಂಜು ಎಂದು ಗುರುತಿಸಲಾಗಿದ್ದು, ಈತನು ವಾಮದಪದವು ಸಮೀಪದ ಅಂಗಡಿಪಲ್ಕೆ ನಿವಾಸಿ ಸುಚಿತ್ರಾ (17) ಎಂಬಾಕೆಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈಕೆ ಕಳೆದ ಮಂಗಳವಾರ ಇಲ್ಲಿನ ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ತನ್ನ ಅಂಕಪಟ್ಟಿ ತರಲೆಂದು ಹೋಗಿದ್ದು, ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಳು. ಇತ್ತೀಚೆಗೆ ನಡೆದ ಈಕೆಯ ಸೋದರ ಮಾವನ ವಿವಾಹ ಸಂದರ್ಭದಲ್ಲಿ ಮಡಿಕೇರಿ ನಿವಾಸಿ ಮಂಜು ಎಂಬಾತನು ಪರಿಚಯಿಸಿಕೊಂಡು ಇದೀಗ ಪ್ರೀತಿಯ ನೆಪದಲ್ಲಿ ಅಪಹರಿಸಿದ್ದಾನೆ ಎಂದು ದೂರಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ

By Suddi9

Leave a Reply

Your email address will not be published. Required fields are marked *